HEALTH TIPS

ಉಚಿತ ವೈ-ಫೈ ಗಾಗಿ ಉಪಗ್ರಹ ಉಡಾವಣೆ!

             
       ಬೀಜಿಂಗ್: ತಂತ್ರಜ್ಞಾನ ಕ್ಷೇತ್ರದಲ್ಲಿ ಸದಾ ಹೊಸ ಪ್ರಯೋಗ ಮಾಡುವ ಚೀನಾ ಈಗ ಉಚಿತವಾಗಿ ವಿಶ್ವಾದ್ಯಂತ ಉಚಿತ ವೈ-ಫೈ ಸೇವೆ ಒದಗಿಸುವ ಯೋಜನೆಗಾಗಿ ಉಪಗ್ರಹವನ್ನು ಉಡಾವಣೆ ಮಾಡಲು ಸಜ್ಜುಗೊಂಡಿದೆ.
      ಸಂವಹನ ಕ್ಷೇತ್ರದ ಖಾಸಗಿ ಸಂಸ್ಥೆಯೊಂದು ಉಪಗ್ರಹ ಉಡಾವಣೆ ಮಾಡುತ್ತಿದ್ದು, ಲಿಂಕ್ ಶ್ಯೂರ್ ನೆಟ್ವಕರ್್ ನ ಪ್ರಕಾರ  ಚೀನಾದ ವಾಯುವ್ಯ ಪ್ರಾಂತ್ಯದಲ್ಲಿ ಜಿಯುಕ್ವಾನ್ ಸ್ಯಾಟಲೈಟ್ ಲಾಂಚ್ ಸೆಂಟರ್ ನಿಂದ ಉಪಗ್ರಹ ಉಡಾವಣೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
      ಮುಂದಿನ ವರ್ಷ ಉಪಗ್ರಹ ಉಡಾವಣೆಯಾಗಲಿದ್ದು, 2020 ರ ವೇಳೆಗೆ 10 ಉಪಗ್ರಹಗಳನ್ನು ಉಡಾವಣೆ ಮಾಡುವುದಕ್ಕೆ ಸಂಸ್ಥೆ ಯೋಜನೆ ಹೊಂದಿದೆ. ಈ ಉಪಗ್ರಹ ಉಡಾವಣೆಯಿಂದಾಗಿ ಮೊಬೈಲ್ ನೆಟ್ವಕರ್್ ಇಲ್ಲದೇ ಇರುವ ಪ್ರದೇಶಗಳಲ್ಲಿಯೂ ಉಪಗ್ರಹಗಳ ಸಹಾಯದಿಂದ ಇಂಟರ್ ನೆಟ್ ನ್ನು ಬಳಕೆ ಮಾಡಬಹುದಾಗಿದೆ ಎಂದು ಪೀಪಲ್ಸ್ ಡೈಲಿ ವರದಿ ಪ್ರಕಟಿಸಿದೆ.
      ಈ ಯೋಜನೆಗಾಗಿ ಲಿಂಕ್ ಶ್ಯೂರ್ ಸಂಸ್ಥೆ 3 ಬಿಲಿಯನ್ ಯುವಾನ್ ನ್ನು ಹೂಡಿಕೆ ಮಾಡಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries