ಬದಿಯಡ್ಕ: ಶ್ರೀಮದ್ ಎಡನೀರು ಮಠದಲ್ಲಿ ಶ್ರೀಮದೀಶ್ವರಾನಂದ ಶ್ರೀಪಾದಂಗಳವರ ಆರಾಧನಾ ಮಹೋತ್ಸವವು ಡಿ.4 ರಮದು ಮಂಗಳವಾರ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ9.30ಕ್ಕೆ ಧ್ವಜಾರೋಹಣ, ಮೆರವಣಿಗೆ, 12ಕ್ಕೆ ಮಹಾಪೂಜೆ, ವೃಂದಾವನ ಪೂಜೆ, ತೀರ್ಥಪ್ರಸಾದ ವಿತರಣೆ ನಡೆಯಲಿದೆ.
ರಾತ್ರಿ 7 ರಿಂದ ಆರಾಧನಾ ಮಹೋತ್ಸವ ಸಭಾ ಕಾರ್ಯಕ್ರಮ ನಡೆಯಲಿದ್ದು, ಬೆಂಗಳೂರು ವಿವಿಯ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಶಪುರಂ ಜಿ.ವೆಂಕಟೇಶ್ ಅಧ್ಯಕ್ಷತೆ ವಹಿಸುವರು. ಕಟೀಲು ಶ್ರೀದುಗರ್ಾಪರಮೇಶ್ವರಿ ಕ್ಷೇತ್ರದ ಆನುವಂಶಿಕ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಅವರು ಉಪಸ್ಥಿತರಿವರು. ಕನರ್ಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಟಿ.ಶ್ಯಾಮ್ ಭಟ್ ಅವರು ಎಡನೀರು ಶ್ರೀಗಳ 58ನೇ ಚಾತುಮರ್ಾಸ್ಯ ಸಮಾರಂಭದ ಸ್ಮೃತಿಸಂಚಯ ಪುಸ್ತಕ ಬಿಡುಗಡೆಗೊಳಿಸುವರು. ಮೇಲುಕೋಟೆ ಸಂಸ್ಕೃತ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ವಿದ್ವಾನ್.ಉಮಾಕಾಂತ ಭಟ್ ಹಾಗೂ ವೇದಮೂತರ್ಿ ಗೋಪಾಲಕೃಷ್ಣ ಭಟ್ ಕಿಳಿಂಗಾರು ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು. ವಿದ್ವಾನ್.ಹಿರಣ್ಯ ವೆಂಕಟೇಶ್ವರ ಭಟ್ ಅಭಿನಂದನಾ ಭಾಷಣಗೈಯ್ಯುವರು. ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಬಾಲಕೃಷ್ಣ ವೊಕರ್ೂಡ್ಲು ಅವರು ಗುರುವಂದನೆ ನಡೆಸುವರು. ಸಭಾ ಕಾರ್ಯಕ್ರಮದ ಬಳಿಕ ರಾತ್ರಿ 9 ರಿಂದ ಸಾಮಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದುಷಿಃ ಸುಮಾ ಸುಧೀಂದ್ರ ಬೆಂಗಳೂರು ಅವರಿಂದ ವೀಣಾ ವಾದನ ಹಾಗೂ ಕು.ದೀಪ್ತಿ ಸುಧೀಂದ್ರ ಬೆಂಗಳೂರು ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ ಎಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಡಿ. 6 ರಂದು ಗುರುವಾರ ರಾತ್ರಿ 8 ರಿಂದ ಶ್ರೀಮಠದಲ್ಲಿ ವಿಶೇಷ ಲಕ್ಷದೀಪೋತ್ಸವವು ನಡೆಯಲಿರುವುದು.