ಕಾಸರಗೋಡು: ಅರ್ಧದಲ್ಲೇ ಶಾಲಾ ಶಿಕ್ಷಣ ಮೊಟಕುಗೊಳಿಸುವ ಪಿಡುಗಿನಿಂದ ಕಾಸರಗೋಡು ಜಿಲ್ಲೆಯಲ್ಲಿ ಮುಕ್ತವಾಗಿಸುವ ಉದ್ದೇಶದಿಂದ ಶಿಶು ಸೌಹಾರ್ದ ಜಿಲ್ಲಾಯಾಗಿಸುವ ಯೋಜನೆ ಡ್ರಾಪ್ ಔಟ್ನ ಜಿಲ್ಲಾ ಮಟ್ಟದ ಮೋನಿಟರಿಂಗ್ ಸಮಿತಿ ಸಭೆ ಜರುಗಿತು.
ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಸಜಿತ್ಬಾಬು ಅಧ್ಯಕ್ಷತೆ ವಹಿಸಿದ್ದರು.
ಡ್ರಾಪ್ ಔಟ್ ಎಂಬುದು ಅರ್ಧದಲ್ಲೇ ಶಾಲಾ ಶಿಕ್ಷಣ ಮೊಟಕುಗೊಳಿಸಿದ ಮಕ್ಕಳನ್ನು ಪತ್ತೆಮಾಡುವ ಉದ್ದೇಶದಿಂದ ಚಟುವಟಿಕೆ ನಡೆಸುವ ಯೋಜನೆಯಾಗಿದ್ದು,
ಕೌಟುಂಬಿಕ ಸಮಸ್ಯೆಗಳು, ಜಿಲ್ಲೆ ಬಿಟ್ಟು ತೆರಳಿದವರು, ಆರೋಗ್ಯ ಸಮಸ್ಯೆ ಇರುವವರು ಇತ್ಯಾದಿ ಕಾರಣಗಳಿಂದ ಶಿಕ್ಷಣ ಮೊಟಕುಗೊಳಿಸಿದ ಮಕ್ಕಳ ನಿಖರ ಗಣನೆ ಸಿದ್ಧಪಡಿಸಲು ಸಭೆ ನಿರ್ಧರಿಸಿದೆ.
ಮಕ್ಕಳ ಅಭಿವೃದ್ಧಿ ಸಮಿತಿ ಪದಾಧಿಕಾರಿ ಮಾಧುರಿ ಎಸ್.ಬೋಸ್,
ಕಾಸರಗೋಡು ಶಿಕ್ಷಣ ಉಪನಿದರ್ೇಶಕ ಡಾ.ಗಿರೀಶ್ ಚೋಲಯಿಲ್, ಜಿಲ್ಲಾ ಶಿಶು ಸಂರಕ್ಷಣೆ ಅಧಿಕಾರಿ ಪಿ.ಬಿಜು,
ಕೆ.ವಿ.ಪುಷ್ಪಾ ಮೊದಲಾದವರು ಉಪಸ್ಥಿತರಿದ್ದರು.