ಬದಿಯಡ್ಕ : ಡಿಸೆಂಬರ್ 16ರಂದು ಕಾಸರಗೋಡಿನಲ್ಲಿ ನಡೆಯಲಿರುವ ವಿರಾಟ್ ಹಿಂದೂ ಸಮಾಜೋತ್ಸವದ ಪೂರ್ವಭಾವಿಯಾಗಿ ಡಿ.1ರಂದು ಪಂಚಾಯತ್ ಕೇಂದ್ರಗಳಲ್ಲಿ ಧ್ವಜದಿನವನ್ನಾಗಿ ಆಚರಿಸಲಾಗುವುದು. ಡಿ.2ರಂದು ಹಿಂದೂ ಮನೆಗಳಲ್ಲಿ ಓಂಕಾರ ಧ್ವಜಾರೋಹಣ, ಡಿ.8ಕ್ಕೆ ಸಾಮೂಹಿಕ ಓಟ (ಮ್ಯಾರಥಾನ್), ಡಿ.9ಕ್ಕೆ ಬೈಕ್ ರ್ಯಾಲಿಗಳು ನಡೆಯಲಿದೆ ಎಂದು ಬುಧವಾರ ಬದಿಯಡ್ಕ ಶ್ರೀ ಗಣೇಶಮಂದಿರದಲ್ಲಿ ನಡೆದ ಪೂರ್ವತಯಾರಿ ಸಭೆಯಲ್ಲಿ ತೀಮರ್ಾನಿಸಲಾಯಿತು. ಈಗಾಗಲೇ ಹಲವು ಪಂಚಾಯತ್ಗಳಲ್ಲಿ ಸಮಯವನ್ನೂ ನಿಶ್ಚಯಿಸಲಾಗಿದೆ ಎಂದು ಸಮಾಜೋತ್ಸವ ಸಮಿತಿಯ ಪ್ರಧಾನ ಕಾರ್ಯದಶರ್ಿ ಅಶೋಕ್ ಬಾಡೂರು ತಿಳಿಸಿದರು. ಕಾರ್ಯಕ್ರಮದ ಬಗ್ಗೆ ಈಗಾಗಲೇ ಕೈಗೊಂಡ ಹಾಗೂ ಇನ್ನು ವಿವಿಧ ಪಂಚಾಯತ್ಗಳಲ್ಲಿ ಅಗತ್ಯವುಳ್ಳ ಸಿದ್ಧತೆಯ ಕುರಿತು ಅವರು ವಿವರಿಸಿದರು.
ಸಮಾಜೋತ್ಸವ ಕೇಂದ್ರೀಯ ಸಮಿತಿ ಸಂಯೋಜಕ ಬಿ.ಗೋಪಾಲ ಚೆಟ್ಟಿಯಾರ್ ಪೆರ್ಲ ಮಾರ್ಗದರ್ಶನವನ್ನು ನೀಡಿದರು. ಸಮಾಜೋತ್ಸವದ ಪೂರ್ವಭಾವಿಯಾಗಿ ವಿವಿಧ ಕಾರ್ಯಕ್ರಮಗಳು ಪಂಚಾಯತ್ ಮಟ್ಟದಲ್ಲಿ ನಡೆಯಲಿದೆ. ಬದಿಯಡ್ಕದಲ್ಲಿ ಡಿ.9ರಂದು ಬೆಳಗ್ಗೆ 9 ಗಂಟೆಗೆ ಶ್ರೀ ಗಣೇಶಮಂದಿರದಿಂದ ಬೈಕ್ ರ್ಯಾಲಿ ಆರಂಭಿಸಲು ನಿಶ್ಚಯಿಸಲಾಯಿತು.
ಸಮಾಜೋತ್ಸವ ಕೇಂದ್ರೀಯ ಸಮಿತಿಯ ಐತ್ತಪ್ಪ ಮವ್ವಾರು, ತಿಮ್ಮಪ್ಪ ಮೀಯಪದವು, ಸಂಜೀವ ಶೆಟ್ಟಿ ಮೊಟ್ಟೆಕುಂಜ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಪುತ್ತಿಗೆ, ಬದಿಯಡ್ಕ, ಕುಂಬ್ಡಾಜೆ ಪಂಚಾಯತ್ಗಳ ಸಮಾಜೋತ್ಸವ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.