ಬದಿಯಡ್ಕ: ಕಥೋಲಿಕ್ ಸಭಾ ಬೇಳ ಮತ್ತು ಫಾದರ್ ಮುಲ್ಲರ್ಸ್ ಆಸ್ಪತ್ರೆ ಕಂಕನಾಡಿ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಡಿ.2 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರ ವರೆಗೆ ಬೇಳ ಸೈಂಟ್ ಮೇರಿಸ್ ಕಾಲೇಜು ವಠಾರದಲ್ಲಿ ಉಚಿತ ವೈದ್ಯಕೀಯ ಶಿಬಿರ ನಡೆಯಲಿದೆ.
ಬದಿಯಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಉದ್ಘಾಟಿಸುವರು. ಬೇಳ ಶೋಕಮಾತಾ ಧರ್ಮಕೇಂದ್ರದ ಧರ್ಮಗುರು ಅತೀ ವಂದನೀಯ ಸ್ವಾಮಿ ಜೋನ್ ವಾಸ್ ಆಶೀರ್ವಚನ ನೀಡುವರು. ಬೇಳ ಸೈಂಟ್ ಮೇರಿಸ್ ಕಾಲೇಜು ಪ್ರಾಂಶುಪಾಲ ವಂದನೀಯ ಸ್ವಾಮಿ ಅಶೋಕ್ ರಾಯನ್ ಕ್ರಾಸ್ತಾ, ಬೇಳದ ಕಪಿತಾನಿಯಾ ಕಾನ್ವೆಂಟ್ ಸುಪಿರಿಯರ್ ಭಗಿನೀ ಕಾಮರ್ಿನ್ ಪಿರೇರಾ, ಬದಿಯಡ್ಕ ಗ್ರಾಮ ಪಂಚಾಯತಿ ಸದಸ್ಯೆ ಅನಿತಾ ಕ್ರಾಸ್ತಾ ಅತಿಥಿಗಳಾಗಿ ಭಾಗವಹಿಸುವರು.