ಕಾಸರಗೋಡು : ಹಲ್ಲೆ ಸಹಿತ ದೌರ್ಜನ್ಯಕ್ಕೊಳಗಾಗುವ ಮಹಿಳೆಯರಿಗೆ ಕಾನೂನು ಸಂರಕ್ಷಣೆ ಒದಗಿಸುವ ಮತ್ತು ಹೆಚ್ಚಳಗೊಳ್ಳುತ್ತಿರುವ ಮನೆಗಳಲ್ಲಿನ ದೌರ್ಜನ್ಯ ವಿರುದ್ದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೇರಳ ಮಹಿಳಾ ಆಯೋಗ ವತಿಯಿಂದ ಗುರುವಾರ ಮುಖಾಮುಖಿ ಕಾರ್ಯಕ್ರಮ ಜರುಗಿತು.
ಕಾಞಂಗಾಡು ನಗರಸಭೆ ಸಭಾಂಗಣದಲ್ಲಿ ನಡೆದ ಸಮಾರಂಭವನ್ನು ಆಯೋಗ ಅಧ್ಯಕ್ಷೆ ಎಂ.ಸಿ.ಜೋಸೆಫೈನ್ ಉದ್ಘಾಟಿಸಿದರು.
ಸದಸ್ಯೆ ಡಾ.ಶಾಹಿದಾ ಕಮಾಲ್ ಅಧ್ಯಕ್ಷತೆ ವಹಿಸಿದ್ದರು.
"ಮನೆಗಳಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ವಿರುದ್ಧ ಕಾನೂನು"
ಎಂಬ ವಿಷಯದಲ್ಲಿ ಉಪನ್ಯಾಯಮೂರ್ಥಿ ಫಿಲಿಪ್ ಥಾಮಸ್ ಪ್ರಬಂಧ ಮಂಡಿಸಿದರು.
ಜಿಲ್ಲಾ ಪಂಚಾಯತ್ ಕಲ್ಯಾಣ ಸ್ಥಾಯೀ ಸಮಿತಿ ಅಧ್ಯಕ್ಷೆ ಎ.ಪಿ.ಉಷಾ,
ಜಿಲ್ಲಾ ಪಂಚಾಯತ್ ಸದಸ್ಯೆ ಇ.ಪದ್ಮಾವತಿ, ಕಾಞಂಗಾಡು ನಗರಸಭೆ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ಗಂಗಾ ರಾಧಾಕೃಷ್ಣನ್,
ಮಹಿಳಾ ರಕ್ಷಣೆ ಅಧಿಕಾರಿ ಪ್ರಮೀಳಾ ಮೊದಲಾದವರು ಉಪಸ್ಥಿತರಿದ್ದರು.
ಕಾಞಂಗಾಡು ನಗರಸಭೆ ಅಧ್ಯಕ್ಷ ವಿ.ವಿ.ರಮೇಶನ್ ಸ್ವಾಗತಿಸಿದರು.
ಸಾರ್ವಜನಿಕ ಸಂಪರ್ಕ ಅಧಿಕಾರಿ ಕೆ.ದೀಪಾ ವಂದಿಸಿದರು.