ಮಂಜೇಶ್ವರ : ಇತಿಹಾಸ ಪ್ರಸಿದ್ದ ಕಡಂಬಾರ್ ವಲಿಯುಲ್ಲಾಹಿ ಹಾಜಿಯಾರ್ ಉಪ್ಪಾಪ ಉರೂಸ್ ಸಮಾರಂಭ ಜನವರಿ 1 ರಿಂದ 12 ರ ವರೆಗೆ ನಡೆಯಲಿದೆಯೆಂದು ಉರೂಸ್ ಜಮಾಅತ್ ಸಮಿತಿ ಪದಾಧಿಕಾರಿಗಳು ಮಂಜೇಶ್ವರ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗ್ಟೋಯಲ್ಲಿ ತಿಳಿಸಿದ್ದಾರೆ.
ಜನವರಿ 13 ಭಾನುವಾರ ಹಗಲು ಉರೂಸ್ ನೇರ್ಚೆ ನಡೆಯಲಿದೆ. ಜನವರಿ 1 ರಂದು ಮಂಗಳವಾರ ಸಂಜೆ ನಡೆಯುವ ಮಖಾಂ ಝಿಯಾರತ್ ಹಾಗೂ ದ್ವಜಾರೋಹಣಕ್ಕೆ ಸಯ್ಯದ್ ಅತ್ತಾವುಲ್ಲಾ ತಂಙಳ್ ಉದ್ಯಾವರ ನೇತೃತ್ವ ನೀಡುವರು. ಬಳಿಕ ರಾತ್ರಿ 8.30 ಕ್ಕೆ ನಡೆಯುವ ಸಮಾರಂಭದಲ್ಲಿ ಸಯ್ಯದ್ ಆಟ್ಟಕ್ಕೋಯ ತಂಙಳ್ ಕುಂಬೋಳ್ ಧಾರ್ಮಿಕ ಪ್ರವಚನಕ್ಕೆ ಚಾಲನೆ ನೀಡುವರು. ಕಡಂಬಾರ್ ಮುದರ್ರಿಸ್ ಎಂ.ಪಿ ಮೊಹಮ್ಮದ್ ಸಅದಿ ಅಧ್ಯಕ್ಷತೆ ವಹಿಸುವರು. ಸಯ್ಯದ್ ಶಹೀರ್ ಅಲ್ ಬುಖಾರಿ ತಂಙಳ್ ಮಳ್‍ಹರ್ ಪ್ರಾರ್ಥನೆಗೆ ನೇತೃತ್ವ ನೀಡುವರು. ಅಬ್ದುಲ್ ಲತೀಫ್ ಸಅದಿ ಪಝಶ್ವಿ ಮುಖ್ಯ ಭಾಷಣ ಮಾಡುವರು. ವಿವಿಧ ದಿನಗಳಲ್ಲಾಗಿ ನಡೆಯುವ ಧಾರ್ಮಿಕ ಪ್ರವಚನದಲ್ಲಿ ಹಾಫಿಳ್ ಇ.ಪಿ ಅಬೂಬಕ್ಕರ್ ಅಲ್ ಖಾಸಿಮಿ, ಇಬ್ರಾಹಿಂ ಬಾತಿಷ ತಂಙಳ್ ಆನೆಕಲ್ಲು, ಪ್ರೊ. ಆಲಿಕ್ಕುಟ್ಟಿ ಮುಸ್ಲಿಯಾರ್, ಎ.ಎಂ ನೌಶಾದ್ ಬಾಖವಿ, ಸಯ್ಯದ್ ಕೆ.ಎಸ್.ಎಂ ತಂಙಳ್ ಗಾಂಧೀ ನಗರ, ಹಾಮಿದ್ ಯಾಸೀನ್ ಜೌಹರಿ ಕೊಲ್ಲಂ , ಸಯ್ಯದ್ ಝೈನುಲ್ ಆಬಿದೀನ್ ಜಿಫ್ರೀ ತಂಙಳ್ ಪೊಸೋಟ್, ಎಸ್.ಎಸ್ ಶಮೀರ್ ದಾರಿಮಿ ಕೊಲ್ಲಂ, ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ಕುನ್ನಂಗೈ, ಸಯ್ಯದ್ ನಜ್ಮುದ್ದೀನ್ ತಂಙಳ್ ಏಝಿಮಲ, ಯಹ್ಯಾ ಬಾಖವಿ ಪುಝಕ್ಕರ, ಉಸ್ತಾದ್ ಅಲ್ ಹಾಜಿ ಹಂಝ ಮುಸ್ಲಿಯಾರ್ ಮೂರಿಯಾಡ್, ಅಬ್ದುಲ್ ಕರೀಂ ಫೈಝಿ ಕುಂತೂರು, ಸಯ್ಯದ್ ಜಹ್‍ಫರ್ ಸಾದಿಕ್ ತಂಙಳ್ ಕುಂಬೋಳ್, ವಹಾಬ್ ನಹೀಮೀ ಕೊಲ್ಲಂ, ಸಯ್ಯದ್ ಸಫ್ವಾನ್ ತಂಙಳ್ ಏಝಿಮಲ, ಶೌಕತ್ ಅಲೀ ಫೈಝಿ ವೆಳ್ಳಮುಂಡ, ಎಂ.ಎ ಖಾಸಿಂ ಮುಸ್ಲಿಯಾರ್, ಖಲೀಲ್ ಹುದವಿ ಅಲ್ ಮಾಲಿಕಿ, ಸಿಂಸಾರುಲ್ ಹಕ್ ಹುದವಿ, ಅಬ್ದುಲ್ ಖಾದರ್ ಮುಸ್ಲಿಯಾರ್, ಅಬೂಬಕ್ಕರ್ ಸಿದ್ದೀಕ್ ಅಝ್‍ಹರಿ ಪಯ್ಯನ್ನೂರು ಮೊದಲಾದವರು ಭಾಗವಹಿಸುವರು.
ಜನವರಿ 12 ರಂದು ರಾತ್ರಿ ನಡೆಯುವ ಸಮಾರೋಪ ಸಮಾರಂಭವನ್ನು ಸಮಸ್ತ ಕೇರಳ ಜಂಈಯ್ಯತ್ತುಲ್ ಉಲಮಾ ಅಧ್ಯಕ್ಷ ಖಾಝಿ ಜಿಫ್ರೀ ಮುತ್ತುಕ್ಕೋಯ ತಂಙಳ್ ಉದ್ಘಾಟಿಸುವರು. ಅನ್ವರ್ ಮುಹ್ಯುದ್ದೀನ್ ಹುದವಿ ಆಲುವ ಮುಖ್ಯ ಭಾಷಣ ಮಾಡುವರು. ಜನವರಿ 13 ರಂದು ಭಾನುವಾರ ಸುಬುಹಿ ನಮಾಜಿನ ಬಳಿಕ ನಡೆಯುವ ಖತಮುಲ್ ಕುರ್‍ಆನ್ ಗೆ ಎಂ.ಪಿ ಮೊಹಮ್ಮದ್ ಸಅದಿ ನೇತೃತ್ವ ನೀಡುವರು. ಬೆಳಿಗ್ಗೆ 10 ಘಂಟೆಗೆ ನಡೆಯುವ ಮೌಲೀದ್ ಪಾರಾಯಣ ಕ್ಕೆ ಕೆ.ಎಸ್ ಅಲೀ ತಂಙಳ್ ಕುಂಬೋಲ್ ನೇತೃತ್ವ ನೀಡುವರು. ಅಬ್ದುಲ್ ಖಾದರ್ ಮುಸ್ಲಿಯಾರ್ ಕಾಸರಗೋಡು ಪ್ರಾರ್ಥನೆಗೆ ನೇತೃತ್ವ ನೀಡುವರು. ಬಳಿಕ ಅನ್ನದಾನ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಎ.ಕೆ.ಎಂ ಅಶ್ರಫ್, ಎಂ.ಪಿ ಮೊಹಮ್ಮದ್ ಸಅದಿ, ಅಬೂಬಕ್ಕರ್ ಹೊಸಮನೆ, ಇ.ಎನ್ ಅಬೂಬಕ್ಕರ್ ಹಾಜಿ ಗಾಂಧೀ ನಗರ, ಅಬ್ದುಲ್ ಅಝೀಝ್ ಬರ್ವಾ ಕಡಂಬಾರ್, ತಾಜುದ್ದೀನ್, ಜಾಸಿಂ ಅಲ್ ಬರಕ, ಮೊಯ್ದೀನ್ ಉಪಸ್ಥಿತರಿದ್ದರು.