10ರಂದು ಗ್ರಂಥಪಾಲಕರ ನೇಮಕಾತಿ ಸಂದರ್ಶನ
0
ಡಿಸೆಂಬರ್ 05, 2018
ಮಂಜೇಶ್ವರ: ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನಲ್ಲಿ ಇಬ್ಬರು ತಾತ್ಕಾಲಿಕ ಗ್ರಂಥಪಾಲಕರ (ಲೈಬ್ರರಿ ಇಂಟರ್ನ್ಸ್) ನೇಮಕಾತಿ ನಡೆಯಲಿದೆ. ಆಸಕ್ತರು ಸಂಬಂಧಪಟ್ಟ ಅಸಲಿ ಅರ್ಹತಾಪತ್ರಗಳ ಸಹಿತ ಡಿ.10ರಂದು ಬೆಳಗ್ಗೆ 11 ಗಂಟೆಗೆ ಕಾಲೇಜಿನಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗಬಹುದು. ಬಿಎಲ್ಐಎಸ್ (ರೆಗ್ಯುಲರ್), ಎಂಎಲ್ಐಎಸ್/ಎರಡು ವರ್ಷಗಳ ವೃತ್ತಿ ಅನುಭವ ಹೊಂದಿವರಿಗೆ ಆದ್ಯತೆ ಇರುವುದು. ಮಾಹಿತಿಗೆ ದೂರವಾಣಿ ನಂಬ್ರ: 04998-272670.