ಡಿ.13ರಿಂದ ಮುಳಿಯಾರು ಕ್ಷೇತ್ರದಲ್ಲಿ ಷಷ್ಠೀ ಉತ್ಸವ
0
ಡಿಸೆಂಬರ್ 04, 2018
ಮುಳ್ಳೇರಿಯ: ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಷಷ್ಠೀ ಉತ್ಸವ ಡಿ.13 ಮತ್ತು 14ರಂದು ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಶ್ರೀ ಅರವತ್ತ್ ದಾಮೋದರ ತಂತ್ರಿಗಳ ಕಾರ್ಮಿಕತ್ವದಲ್ಲಿ ನಡೆಯಲಿದೆ.
ಡಿ.13ರಂದು ಬೆಳಿಗ್ಗೆ ಅಭಿಷೇಕ, ಗಣಹೋಮ, ನವಕಾಭಿಷೇಕ, 10ರಿಂದ ಭಕ್ತಿಗಾನಸುಧಾ, ವಿದ್ವಾನ್ ನಟರಾಜ ಶರ್ಮ ಇವರ ಶಿಷ್ಯೆ ಸ್ಮಿತಾ ಉದಯಪ್ರಕಾಶ್ ಮತ್ತು ಬಳಗದವರಿಂದ, ಸಹಗಾಯನ ಗಡಿನಾಡ ಕೋಗಿಲೆ ವಿಠಲ ಶೆಟ್ಟಿ ಕಾಸರಗೋಡು ಮತ್ತು ಪ್ರಸನ್ನಕುಮಾರ್ ಬೆಳ್ಳಾರೆ, 10.30ರಿಂದ ತುಲಾಭಾರ ಸೇವೆ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಅನ್ನದಾನ, ಸಂಜೆ 6ರಿಂದ ನೀಲೇಶ್ವರ ಗಂಗಾಧರ ಮಾರಾರ್ ಮತ್ತು ಬಳಗದವರಿಂದ ತಾಯಂಬಕ, 6.30ಕ್ಕೆ ಮೂಡುಮನೆ ಬಳ್ಳುಳ್ಳಾಯ ತರವಾಡಿನಿಂದ ಶ್ರೀ ವಿಷ್ಣುಮೂರ್ತಿಯ ಭಂಡಾರ ಆಗಮನ, ರಾತ್ರಿ 7ಕ್ಕೆ ಮಹಾಪೂಜೆ, ಶ್ರೀಭೂತಬಲಿ, ಕೋಟೂರು ಕಟ್ಟೆ ಸವಾರಿ, ರಾತ್ರಿ 9ರಿಂದ ಮಲ್ಲ ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಕಲಾ ಮಂಡಳಿಯವರಿಂದ ಯಕ್ಷಗಾನ ಬಯಲಾಟ, ಶ್ರೀದೇವರು ಕೋಟೂರಿನಿಂದ ಹಿತಿರುಗಿ ಬಂದು ಕಟ್ಟೆಪೂಜೆ, ರಾಜಾಂಗಣದಲ್ಲಿ ನೃತ್ಯಸೇವೆ ನಡೆಯಲಿದೆ.
ಡಿ.14ರಂದು ಬೆಳಿಗ್ಗೆ 10ರಿಂದ ದರ್ಶನಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಮಂತ್ರಾಕ್ಷತೆ, ಅನ್ನದಾನ, ಶ್ರೀ ವಿಷ್ಣುಮೂರ್ತಿ ದೈವದ ಕೋಲ, ರಾತ್ರಿ 7ರಿಂದ ಶ್ರೀ ರಂಗಪೂಜೆ, ರಾತ್ರಿ 9.30ರಿಂದ ಕೊಲ್ಲಂಗಾನ ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ಬಯಲಾಟ ಕುಮಾರವಿಜಯ ನಡೆಯಲಿದೆ.