ಡಿ.14 ರಂದು ಬನ್ನೂರು ಕ್ಷೇತ್ರದಲ್ಲಿ ವಿಶೇಷ ಕಾರ್ಯಕ್ರಮ
0
ಡಿಸೆಂಬರ್ 03, 2018
ಮಧೂರು: ಬನ್ನೂರು ಶ್ರೀ ಶಿವರಾಮೇಶ್ವರಿ ಕ್ಷೇತ್ರದಲ್ಲಿ ವಿಶೇಷ ಕಾರ್ಯಕ್ರಮ ಡಿ.14 ರಂದು ನಡೆಯಲಿದೆ. ಬೆಳಿಗ್ಗೆ 9 ಕ್ಕೆ ವಿಶೇಷ ಗಣಪತಿ ಹವನ, 10 ಗಂಟೆಗೆ ಗುರುಪೂಜೆ, ಮಧ್ಯಾಹ್ನ 12 ಕ್ಕೆ ಮಹಾಪೂಜೆ, ದೇವಿಯ ದಿವ್ಯ ದರ್ಶನ, ಅನ್ನದಾನ, ಸಂಜೆ 6 ರಿಂದ ಭಜನೆ, 7 ಕ್ಕೆ ಧರ್ಮದೈವ ಗುಳಿಗ ಕೋಲ, 7.30 ರಿಂದ ಮಧೂರು ಶ್ರೀ ಬೊಡ್ಡಜ್ಜ ಯಕ್ಷಭಾರತಿ ಇವರಿಂದ `ಶ್ರೀ ದೇವಿ ಮಹಿಷಮರ್ಧಿನಿ' ಯಕ್ಷಗಾನ ಕೂಟ, ರಾತ್ರಿ 10 ರಿಂದ ಪಿಲಿಚಾಮುಂಡಿ ಕೊರತ್ತಿ ಅಮ್ಮನ ದೈವ ಕೋಲ ನಡೆಯುವುದು.
ಸಂಜೆ 4 ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ತಾರಾನಾಥ ಮಧೂರು ಅಧ್ಯಕ್ಷತೆ ವಹಿಸುವರು. ಕ್ಷೇತ್ರದ ಶ್ರೀ ದೇವಿಪ್ರಸಾದ ಸ್ವಾಮೀಜಿ ಆಶೀರ್ವಚನ ನೀಡುವರು. ವಿವಿಧ ಗಣ್ಯರು ಭಾಗವಹಿಸುವರು. ರಾತ್ರಿ 12 ಕ್ಕೆ ಪ್ರಸಾದ ವಿತರಣೆ ನಡೆಯಲಿದೆ.