ಉಪ್ಪಳ: ಇಡೀ ಜಗತ್ತಿಗೆ ಜೀವನ ವನ್ನು ಕಲಿಸಿಕೊಟ್ಟ ಸಂಸ್ಕøತಿ ನಮ್ಮದು. ಆದ್ದರಿಂದಲೇ ಪ್ರಾಚೀನ ಸಂಸ್ಕøತಿ ನಮ್ಮದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಮಂಗಳೂರು ಗ್ರಾಮಾಂತರ ಜಿಲ್ಲಾ ಸಹಸೇವಾ ಪ್ರಮುಖ್ ಜಿತೇಂದ್ರ ಪ್ರತಾಪನಗರ ಹೇಳಿದರು.
ಉಪ್ಪಳ ಅಯ್ಯಪ್ಪ ಮಂದಿರದಲ್ಲಿ ಮಂಡಲಕಾಲದಲ್ಲಿ 52 ದಿನಗಳ ಕಾಲ ನಡೆಯುವಂತಹ ಅನ್ನದಾನದ ಸಂದರ್ಭದಲ್ಲಿ ಉಪ್ಪಳದ ಸಾಮಾಜಿಕ ಸಂಘಟನೆ ಯುವ ಭಾರತಿ ಇದರ ವತಿಯಿಂದ ಧರ್ಮಜಾಗೃತಿಗಾಗಿ ನಡೆಯುವ ಭಾನುವಾರ ನಡೆದ 2 ನೇ ವಾರದ ಧಾರ್ಮಿಕ ಸತ್ಸಂಗ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಭಾರತೀಯ ಸಂಸ್ಕøತಿ, ಹಿಂದು ಜೀವನ ಪದ್ಧ್ದತಿ ಶ್ರೇಷ್ಠವಾದದ್ದು. ನಮ್ಮ ಪ್ರಾಚೀನ ಪರಂಪರೆ ಅತ್ಯಂತ ಶ್ರೀಮಂತವಾಗಿತ್ತು. ನಮ್ಮ ಹಿರಿಯರು ಹಾಕಿಕೊಟ್ಟ ಪರಂಪರೆ ಇಡೀ ಜಗತ್ತಿಗೆ ಮಾದರಿಯಾಗಿದೆ. ಸೊನ್ನೆಯನ್ನು ಕಂಡುಹಿಡಿದವರು ನಾವು. ಜ್ಯೋತಿಷ್ಯ ಶಾಸ್ತ್ರ, ವೈದ್ಯ ಶಾಸ್ತ್ರ ಇದೆಲ್ಲವೂ ನಮ್ಮ ಭಾರತದ ಕೊಡುಗೆ. ಧರ್ಮ, ಸಂಸ್ಕøತಿ, ಆಚಾರ, ವಿಚಾರಗಳಲ್ಲಿ ಶ್ರೇಷ್ಠ ವಿಚಾರಧಾರೆಯನ್ನು ಹಾಕಿಕೊಟ್ಟ ಶ್ರೇಷ್ಠ ಸಂಸ್ಕøತಿ ಭಾರತೀಯ ಸಂಸ್ಕøತಿ ಎಂದರು.
ಕಾರ್ಯಕ್ರಮದಲ್ಲಿ ಉಪ್ಪಳ ಅಯ್ಯಪ್ಪ ಮಂದಿರದ ಗುರುಸ್ವಾಮಿಗಳಾದ ಕುಟ್ಟಿಕೃಷ್ಣನ್, ಸೇವಾ ರತ್ನ ಯು.ಎಂ.ಬಾಸ್ಕರ ಉಪ್ಪಳ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಧರ್ಮಶಾಸ್ತಾ ಬಾಲಗೋಕುಲದ ಪುಟಾಣಿಗಳು ಪ್ರಾರ್ಥನೆ ಹಾಡಿದರು. ಜಗದೀಶ ಪ್ರತಾಪನಗರ ಸ್ವಾಗತಿಸಿದರು. ಯುವ ಭಾರತಿ ಅಧ್ಯಕ್ಷ ರತೀಶ ಐಲ ವಂದಿಸಿದರು. ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಮಾತೆಯರು ಮಹನೀಯರು ಅಯ್ಯಪ್ಪ ವ್ರತಾಧಾರಿಗಳು ಉಪಸ್ಥಿತರಿದ್ದರು.