ಬ್ಯೂನಸ್ ಎರೆಸ್: ದೇಶಭ್ರಷ್ಟ ಆಥರ್ಿಕ ಅಪರಾಧಿಗಳನ್ನು ಪರಿಣಾಮಕಾರಿಯಾಗಿ ಮಟ್ಟಹಾಕಲು ಬಲವಾದ ಮತ್ತು ಸಕ್ರಿಯ ಸಹಕಾರಕ್ಕೆ ಜಿ 20 ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿರುವ ಭಾರತ, 9 ಅಂಶಗಳ ಕಾರ್ಯಸೂಚಿ ಸಲಹೆಯನ್ನು ಮುಂದಿಟ್ಟಿದೆ.
ಅಜರ್ೆಂಟೀನಾ ರಾಜಧಾನಿ ಬ್ಯೂನಸ್ ಎರೆಸ್ ನಲ್ಲಿ ನಡೆಯುತ್ತಿರುವ ಜಿ 20 ದೇಶಗಳ ಶೃಂಗಸಭೆಯಲ್ಲಿ ಭಾಗವಹಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಂತಾರಾಷ್ಟ್ರೀಯ ವ್ಯಾಪಾರ, ಅಂತಾರಾಷ್ಟ್ರೀಯ ಹಣಕಾಸು ಮತ್ತು ತೆರಿಗೆ ವ್ಯವಸ್ಥೆ ಕುರಿತ 9 ಅಂಶಗಳ ಕಾರ್ಯಸೂಚಿಯನ್ನು ಮುಂದಿಟ್ಟಿದ್ದಾರೆ.
ದೇಶಭ್ರಷ್ಠ ಆಥರ್ಿಕ ಅಪರಾಧಗಳನ್ನು ಪರಿಣಾಮಕಾರಿಯಾಗಿ ಮಟ್ಟಹಾಕಲು ಕಾನೂನು ಪ್ರಕ್ರಿಯೆಯಲ್ಲಿ ಸಹಕಾರ, ಅಪರಾಧಿಗಳನ್ನು ಬೇಗನೆ ಪತ್ತೆಹಚ್ಚುವುದು, ಅಪರಾಧಿಗಳ ವಿಚಾರಣೆ ಪ್ರಕ್ರಿಯೆಯಲ್ಲಿ ದಕ್ಷತೆ ತೋರುವುದು ಮೊದಲಾದವುಗಳು ಭಾರತ ಮುಂದಿಟ್ಟಿರುವ ಅಂಶಗಳಲ್ಲಿ ಸೇರಿವೆ.
ಆಥರ್ಿಕ ಅಪರಾಧಿಗಳನ್ನು ತಮ್ಮ ದೇಶಕ್ಕೆ ಸುಗಮವಾಗಿ ಪ್ರವೇಶಿಸಿ ನಿಶ್ಚಿಂತೆಯಿಂದ ನೆಲೆಸಲು ತಡೆಯಲು ಒಂದು ವ್ಯವಸ್ಥಿತ ಕಾರ್ಯತಂತ್ರದ ರಚನೆ ಮಾಡಲು ಒಟ್ಟಾಗಿ ಪ್ರಯತ್ನಿಸುವಂತೆ ಜಿ -20 ದೇಶಗಳಿಗೆ ಭಾರತ ಕರೆ ನೀಡಿದೆ.
ಭ್ರಷ್ಟಾಚಾರ ವಿರುದ್ಧ ವಿಶ್ವಸಂಸ್ಥೆಯ ಸಭೆಯ ತತ್ವಗಳು(ಯುಎನ್ ಸಿಎಸಿ), ಬಹುರಾಷ್ಟ್ರೀಯ ಸಂಘಟಿತ ಅಪರಾಧಗಳ ವಿರುದ್ಧ ವಿಶ್ವಸಂಸ್ಥೆಯ ಹೋರಾಟ(ಯುಎನ್ಒಟಿಸಿ)ವನ್ನು ಪರಿಣಾಮಕಾರಿಯಾಗಿ ಮತ್ತು ಸಂಪೂರ್ಣವಾಗಿ ಜಾರಿಗೆ ತರಬೇಕು ಎಂದು ಭಾರತ ಒತ್ತಾಯಿಸಿದೆ.
ಸ್ಪಧರ್ಾತ್ಮಕ ಅಧಿಕಾರಿಗಳು ಮತ್ತು ಹಣಕಾಸು ಜಾಗೃತ ಘಟಕಗಳ ನಡುವೆ ಸರಿಯಾದ ಸಮಯಕ್ಕೆ ಮತ್ತು ಸವಿಸ್ತಾರವಾಗಿ ಮಾಹಿತಿಗಳ ವಿನಿಮಯಕ್ಕೆ ಅಂತಾರಾಷ್ಟ್ರೀಯ ಸಹಕಾರಕ್ಕಾಗಿ ಆದ್ಯತೆ ಮತ್ತು ಗಮನ ನೀಡಲು ಹಣಕಾಸು ಕಾರ್ಯಪಡೆ (ಎಫ್ಎಟಿಎಫ್) ಕರೆಯಬೇಕು ಎಂದು ಕೂಡ ಭಾರತ ಸಲಹೆ ನೀಡಿದೆ.
ದೇಶಭ್ರಷ್ಟ ಆಥರ್ಿಕ ಅಪರಾಧಿಗಳಿಗೆ ಒಂದು ಸರಿಯಾದ ವ್ಯಾಖ್ಯಾನವನ್ನು ಎಫ್ಎಟಿಎಫ್ ನೀಡಬೇಕು. ಜಿ-20 ರಾಷ್ಟ್ರಗಳಲ್ಲಿ ಆಯಾ ದೇಶಗಳ ಸ್ಥಳೀಯ ಕಾನೂನುಗಳಿಗೆ ಸಂಬಂಧಪಟ್ಟಂತೆ ಮಾರ್ಗದರ್ಶನ ಮತ್ತು ನೆರವು ನೀಡಲು ದೇಶಭ್ರಷ್ಟ ಆಥರ್ಿಕ ಅಪರಾಧಿಗಳ ಬಗ್ಗೆ ಗಮನಹರಿಸಲು ಗುರುತಿಸುವಿಕೆ, ಹಸ್ತಾಂತರ ಮತ್ತು ನ್ಯಾಯಾಂಗ ಪ್ರಕ್ರಿಯೆಗಳಿಗೆ ಎಫ್ಎಟಿಎಫ್ ಒಂದು ಸಾಮಾನ್ಯ ಒಪ್ಪಿಗೆಯ ಪ್ರಮಾಣಿತ ವಿಧಾನಗಳನ್ನು ಬೆಳೆಸಬೇಕು ಎಂದು ಭಾರತ ಹೇಳಿದೆ.
ದೇಶಭ್ರಷ್ಠ ಆಥರ್ಿಕ ಅಪರಾಧಿಗಳ ಗಡೀಪಾರು, ಈಗಿರುವ ವ್ಯವಸ್ಥೆಯಲ್ಲಿ ಅಂತರ ಮತ್ತು ಕಾನೂನು ನೆರವಿಗೆ ಉತ್ತಮ ಅಭ್ಯಾಸ ಮತ್ತು ಅನುಭವಗಳನ್ನು ಹಂಚಿಕೊಳ್ಳಲು ಸಾಮಾನ್ಯ ವೇದಿಕೆಯೊಂದನ್ನು ಸ್ಥಾಪಿಸಲು ಕೂಡ ಭಾರತ ಶಿಫಾರಸು ಮಾಡಿದೆ.
ತಮ್ಮ ದೇಶದಲ್ಲಿ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಆಥರ್ಿಕ ಅಪರಾಧಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಹಸ್ತಾಂತರಿಸುವ ಪ್ರಕ್ರಿಯೆಯನ್ನು ಕೂಡ ಜಿ20 ರಾಷ್ಟ್ರಗಳಿಗೆ ಭಾರತ ಒತ್ತಾಯಿಸಿದೆ.