HEALTH TIPS

ಹವಾಮಾನ ಬದಲಾವಣೆ ವಿರುದ್ಧ ಸಮರ ಸಾರಿದ ವಿಶ್ವಬ್ಯಾಂಕ್: 200 ಶತಕೋಟಿ ಡಾಲರ್ ನೆರವು ಘೋಷಣೆ

ಕಟೊವೈಸ್: ಇಡೀ ವಿಶ್ವಕ್ಕೆ ಮಾರಕವಾಗಿ ಪರಿಣಮಿಸಿರುವ ಹವಾಮಾನ ಬದಲಾವಣೆ ವಿರುದ್ದ ಸಮರ ಸಾರಿರುವ ವಿಶ್ವಬ್ಯಾಂಕ್, ಇದಕ್ಕಾಗಿ ತಾನು ನೀಡುತ್ತಿದ್ದ ನೆರವನ್ನು ಸೋಮವಾರ ದುಪ್ಪಟ್ಟುಗೊಳಿಸಿದೆ. 2021-25ರ ಅವಧಿಯ ಹವಾಮಾನ ಹೂಡಿಕೆ ಕ್ರಿಯಾ ಯೋಜನೆಗೆ ವಿಶ್ವಬ್ಯಾಂಕ್ ದುಪ್ಪಟ್ಟು ನೆರವು ಅಂದರೆ, 200 ಶತಕೋಟಿ ಡಾಲರ್ ನೆರವು ಘೋಷಣೆ ಮಾಡಿದೆ. ಪೋಲಂಡ್ ನಲ್ಲಿ ವಿಶ್ವಸಂಸ್ಥೆ ಹವಾಮಾನ ಶೃಂಗ ಸಭೆ ನಡೆಯುತ್ತಿದ್ದು, ಈ ವೇಳೆ ವಿಶ್ವ ಬ್ಯಾಂಕ್ ದೊಡ್ಡ ಮೊತ್ತದ ನೆರವನ್ನು ಘೋಷಣೆ ಮಾಡಿದೆ. ಶೃಂಗಸಭೆಯಲ್ಲಿ ಒಟ್ಟು 200 ರಾಷ್ಟ್ರಗಳು ಭಾಗವಹಿಸಿದೆ. ವಿಶ್ವಬ್ಯಾಂಕ್'ನ ಇಷ್ಟು ದೊಡ್ಡ ಮೊತ್ತದ ನೆರವು ಹವಾಮಾನ ಬದಲಾವಣೆ ತಡೆ ಪ್ರಯತ್ನಗಳಿಗೆ ಉತ್ತೇಜನ ನೀಡುವುದು ಮಾತ್ರವೇ ಅಲ್ಲದೆ, ಇಡೀ ವಿಶ್ವ ಇದಕ್ಕೆ ಆದ್ಯತೆ ನೀಡಬೇಕೆಂಬ ಸ್ಪಷ್ಟ ಸಂದೇಶವನ್ನೂ ಸಾರಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಈ ಕ್ಷೇತ್ರದಲ್ಲಿ ಮಾಡುವ ಒಟ್ಟು ಸರ್ಕಾರಿ ಹಾಗೂ ಖಾಸಗಿ ವೆಚ್ಚವನ್ನು 2020ರೊಳಗಾಗಿ ರೂ.100 ಶತಕೋಟಿ ಹೆಚ್ಚಿಸಲು ನಿರ್ಧರಿಸಿದ್ದು, ಇದು 2016ರಲ್ಲಿ 48.5 ಶತಕೋಟಿ ಹಾಗೂ ಕಳೆದ ವರ್ಷ 56.7 ಶತಕೋಟಿ ಆಗಿದ್ದು ಎಂದು ಇತ್ತೀಚಿನ ಓಇಸಿಡಿ ಅಂಶಗಳಿಂದ ತಿಳಿದುಬಂದಿದೆ. ದಕ್ಷಿಣ ಧ್ರುವದ ದೇಶಗಳು ಹವಾಮಾನ ಬದಲಾವಣೆ ಪರಿಣಾಮ ಎದುರಿಸುವ ನಿಟ್ಟಿನಲ್ಲಿ ಆರಂಭಿಸಿರುವ ಈ ಸಮರ ಇದೀಗ ಉತ್ತರ ಧ್ರುವದ ರಾಷ್ಟ್ರಗಳೂ ಅನುಸರಿಸುವಂತೆ ಪ್ರೇರೇಪಿಸಿದೆ. ವಿಶ್ವಬ್ಯಾಂಕ್ ನೀಡುವ 200 ಶತಕೋಟಿ ಡಾಲರ್ ನೆರವಿನ ಪೈಕಿ 100 ಶತಕೋಟಿ ಡಾಲರ್ ನೇರ ಹಣಕಾಸು ನೆರವಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಉಳಿಕೆಯ ಹಣದ ಮೂರನೇ ಒಂದು ಭಾಗವನ್ನು ವಿಶ್ವಬ್ಯಾಂಕ್'ನ 2 ಸಂಸ್ಥೆಗಳು ಭರಿಸಲಿದ್ದು, ಉಳಿದ ಭಾಗವನ್ನು ಖಾಸಗಿ ಹೂಡಿಕೆ ಮೂಲಕ ಸಂಗ್ರಹಿಸಲಾಗುತ್ತದೆ ಎಂದು ವಿವರಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries