ಅಜರ್ೆಂಟೀನಾ: 2022 ಕ್ಕೆ ಭಾರತ ಮೊದಲ ಬಾರಿಗೆ ಜಿ-20 ಶೃಂಗಸಭೆ ಆಯೋಜಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಇನ್ನೆರಡು ವರ್ಷಗಳಲ್ಲಿ ಭಾರತ 75 ನೇ ವರ್ಷದ ಸ್ವಾತಂತ್ರ್ಯ ದಿನವನ್ನಾಚರಣೆ ಮಾಡಲಿದ್ದು, ಅದೇ ವರ್ಷ ಭಾರತ ಮೊದಲ ಬಾರಿಗೆ ಜಿ-20 ಶೃಂಗಸಭೆಯನ್ನು ಆಯೋಜಿಸಲಿದೆ ಎಂದು ಮೋದಿ ಹೇಳಿದ್ದಾರೆ.
ಅಜರ್ೆಂಟೀನಾದ ರಾಜಧಾನಿಯಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಭಾರತ 2020 ರ ವೇಳೆಗೆ 75 ನೇ ವರ್ಷದ ಸ್ವಾತಂತ್ರ್ಯ ದಿನವನ್ನು ಆಚರಿಸಲಿದೆ, ಈ ಮಹತ್ವದ ಸಂದರ್ಭದಲ್ಲಿ ಭಾರತ ಜಿ-20 ಶೃಂಗಸಭೆಯನ್ನು ಆಯೋಜಿಸಲು ಉತ್ಸುಕವಾಗಿದೆ. ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ಆಥರ್ಿಕತೆಯಾಗಿರುವ ಭಾರತಕ್ಕೆ ಬನ್ನಿ ಎಂದು ಜಿ-20 ನಾಯಕರನ್ನು ಪ್ರಧಾನಿ ಆಹ್ವಾನಿಸಿದ್ದಾರೆ.
ಅಜರ್ೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಯುರೋಪಿಯನ್ ಯೂನಿಯನ್, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ಮೆಕ್ಸಿಕೊ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ, ಟಕರ್ಿ, ಯುಕೆ ಮತ್ತು ಯುಎಸ್ ರಾಷ್ಟ್ರಗಳು ಜಿ-20 ಸದಸ್ಯರಾಗಿದ್ದು, ವಿಶ್ವದ ಶೇ.80 ರಷ್ಟು ಜಿಡಿಪಿಯನ್ನು ಹೊಂದಿವೆ.
2022 ಕ್ಕೆ ಮೊದಲ ಬಾರಿಗೆ ಜಿ-20 ಶೃಂಗಸಭೆ ಆಯೋಜಿಸಲಿರುವ ಭಾರತ: ಮೋದಿ ಘೋಷಣೆ
0
ಡಿಸೆಂಬರ್ 03, 2018