ಕಾಸರಗೋಡು: 16ನೇ ಸಂಸತ್ತಿನ ಸಂಸದರ ಸ್ಥಳೀಯ ಅಭಿವೃದ್ಧಿ ಯೋಜನೆ ಪ್ರಕಾರ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ
26.70 ಕೋಟಿ ರೂ. ಯೋಜನೆಗೆ ಆಡಳಿತೆ ಮಂಜೂರಾತಿ ಲಭಿಸಿದೆ ಎಂದು ಸಂಸದ ಪಿ.ಕರುಣಾಕರನ್ ತಿಳಿಸಿದ್ದಾರೆ.
ಜಿಲ್ಲಾ ಯೋಜನೆ ಸಮಿತಿ ಸಭಾಂಗಣದಲ್ಲಿ ನಡೆದ ಸಂಸದರ ಸ್ಥಳೀಯ ಅಭಿವೃದ್ಧಿ ನಿಧಿ ಅವಲೋಕನಸಭೆಯಲ್ಲಿ ಅವರು ಮಾತನಾಡಿದರು.
ಸಂಸದರು ಸೂಚಿಸಿದ
496 ಯೋಜನೆಗಳಲ್ಲಿ 407 ಕಾಮಗಾರಿಗಳಿಗೆ ಈಗಾಗಲೇ ಮಂಜೂರಾತಿ ಲಭಿಸಿದೆ.
251 ಯೋಜನೆಗಳು ಪೂರ್ಣಗೊಂಡಿವೆ. 156 ಯೋಜನೆಗಳ ಚಟುವಟಿಕೆ ನಡೆಯುತ್ತಿವೆ ಎಂದು ಸಭೆ ತಿಳಿಸಿದೆ. ಇವುಗಳಲ್ಲಿ
3.8 ಕೋಟಿ ರೂ.ನ ಯೋಜನೆಗಳು ಪರಿಶಿಷ್ಟ ಜಾತಿ-ಪಂಗಡದವರ ವಲಯಗಳಿಗೆ ಮಂಜೂರುಮಾಡಲಾಗಿದ್ದು,
ಈ ವರೆಗೆ 15.15 ಕೋಟಿ ರೂ. ಈ ನಿಟ್ಟಿನಲ್ಲಿ ವೆಚ್ಚಮಾಡಲಾಗಿದೆ ಎಂದು ತಿಳಿಸಲಾಗಿದೆ.
ಜಿಲ್ಲೆಯಲ್ಲಿ ಸುಮಾರು 71 ರಸ್ತೆಗಳು,
ಶಾಲೆಗಳಿಗೆ ಗ್ರಂಥಾಲಯಗಳಿಗಾಗಿ 36 ಕಟ್ಟಡಗಳು, 27 ಶಾಲೆಗಳೀಗೆ ವಾಹನ, 86 ಶಾಲೆಗಳಿಗೆ ಕಂಪ್ಯೂಟರ್ ಮತ್ತು ಸಂಬಂಧಿ ಉಪಕರಣಗಳು, ಪರಿಶಿಷ್ಟ ಜಾತಿ-ಪಂಗಡ ವಲಯಗಳ 44 ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದೆ ಎಂದು ಸಭೆ ಹೇಳಿದೆ.
ಕಾಸರಗೋಡು ಲೋಕಸಭೆ ಕ್ಷೇತ್ರದಲ್ಲಿ ಕಾಮಗಾರಿ ನಡೆಯುತ್ತಿರುವ ಯೋಜನೆಗಳಿಗೆ ಕೇಂದ್ರ ಸರಕಾರ ತಕ್ಷಣ ಮೊಬಲಗು ಮಂಜೂರುಮಾಡುವಂತೆ ಕ್ರಮನಡೆಸಲಾಗುವುದು ಎಂದು ಸಂಸದ ಪಿ.ಕರುಣಾಕರನ್ ತಿಳಿಸಿದರು.
ಪೂರ್ಣಗೊಂಡ ಯೋಜನೆಗಳ ಬಿಲ್ ಗಳನ್ನು ತುರ್ತಾಗಿ ಸಿದ್ಧಪಡಿಸಿ ನೀಡುವಂತೆ ,
ಪರಿಶಿಷ್ಟ ಜಾತಿ-ಪಂಗಡ ವಲಯಗಳಲ್ಲಿ ಸಂಸದರು ಸೂಚಿಸಿದ ಯೋಜನೆಗಳ ರೂಪುರೇಷೆ ಆದ್ಯತೆರೂಪದಲ್ಲಿ ಸಿದ್ಧಪಡಿಸಿ ನೀಡುವಂತೆ, ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡುವಂತೆ ಸಭೆ ನಿರ್ವಹಣೆ ಅಧಿಕಾರಿಗಳಿಗೆ ಆದೇಶಿಸಿದೆ.
ರಾಜ್ಯದಲ್ಲಿ ಅತ್ಯುತ್ತಮ ರೀತಿಯಲ್ಲಿ ಸಂಸದರ ನಿಧಿ ಬಳಕೆ ಸಾಧ್ಯವಾಗಿದೆ ಎಂದು ಸಂಸದ ಪಿ.ಕರುಣಾಕರನ್ ತಿಳಿಸಿದರು. ಇದಕ್ಕೆ ಕಾರಣರಾದ ಅಧಿಕಾರಿಗಳನ್ನು ಅವರು ಶ್ಲಾಘಿಸಿದರು. 2019 ಮಾರ್ಚ್ ತಿಂಗಳ ವೇಳೆಗೆ ಶೇ 100 ಪ್ರಗತಿಯ ನಿರೀಕ್ಷೆಯಿದೆ ಎಂದವರು ನುಡಿದರು.
ಜಿಲ್ಲಾ ಯೋಜನೆ ಅಧಿಕಾರಿ ಎಸ್.ಸತ್ಯಪ್ರಕಾಶ್,
ಹಣಕಾಸು ಅಧಿಕಾರಿ ಕೆ.ಸತೀಶನ್,
ವಿವಿಧ ಯೋಜನೆಗಳ ನಿರ್ವಹಣೆಯ ಅಧಿಕಾರಿಗಳು ಉಪಸ್ಥಿತರಿದ್ದರು.