ನವದೆಹಲಿ: ಬ್ರಹ್ಮೋಸ್ ಸೂಪರ್ ಸಾನಿಕ ಕ್ರೂಸ್ ಕ್ಷಿಪಣಿ ಸೇರಿದಂತೆ ಒಟ್ಟು ಮೂರು ಸಾವಿರ ಕೋಟಿ ರುಪಾಯಿ ವೆಚ್ಚದ ರಕ್ಷಣಾ ಉಪಕರಣ ಖರೀದಿಗೆ ರಕ್ಷಣಾ ಸಚಿವಾಲಯ ಒಪ್ಪಿಗೆ ನೀಡಿದೆ ಎಂದು ಶನಿವಾರ ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ರಕ್ಷಣಾ ಖರೀದಿ ಸಮಿತಿ(ಡಿಎಸಿ) ಮೂರು ಸಾವಿರ ಕೋಟಿ ರುಪಾಯಿ ವೆಚ್ಚದ ರಕ್ಷಣಾ ಉಪಕರಣ ಖರೀದಿಗೆ ಒಪ್ಪಿಗೆ ಸೂಚಿಸಿದೆ ಎಂದು ಅವರು ಹೇಳಿದ್ದಾರೆ.
ಭಾರತ 1 ಬಿಲಿಯನ್ ಡಾಲರ್ ವೆಚ್ಚದ ಎರಡು ಸ್ಟೆಲ್ತ್ ಫ್ರಿಗೇಟ್ ಗಳನ್ನು ಮತ್ತು ಬ್ರಹ್ಮೋಸ್ ಕ್ಷಿಪಣಿಗಳನ್ನು ಹೊಂದಿದೆ ಎರಡು ಹಡಗುಗಳನ್ನು ಖರೀದಿಸುತ್ತಿದೆ.
ಭಾರತೀಯ ಸೇನೆಯ ಪ್ರಮುಖ ಯುದ್ಧ ಟ್ಯಾಂಕ್ ಅಜರ್ುನ್ ಗಾಗಿ ಆರ್ಮಡರ್್ ರಿಕವರಿ ವೆಹಿಕಲ್ಸ್(ಎಆರ್ ವಿ)ಗಳನ್ನು ಖರೀದಿಸಲು ಸಹ ಡಿಎಸಿ ಒಪ್ಪಿಗೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.