ಈ ವೇಸ್ಟ್ ನಿವಾರಣೆ : ಈ ಸಲದ ಸಂಗ್ರಹ 3926 ಕಿಲೋ ಇಲೆಕ್ಟ್ರಾನಿಕ್ ತ್ಯಾಜ್ಯ!
0
ಡಿಸೆಂಬರ್ 05, 2018
ಕಾಸರಗೋಡು: ಈ ವೇಸ್ಟ್ ನಿವಾರಣೆ ಚಟುವಟಿಕೆಗಳಲ್ಲಿ ನೂತನ ಹೆಜ್ಜೆಗಾರಿಕೆ ನಡೆಸಿರುವ ಜಿಲ್ಲಾ ಶುಚಿತ್ವ ಮಿಷನ್ ಸಂಸ್ಥೆಯು ಜಿಲ್ಲೆಯಿಂದ ಈ ಸಲ ಸಂಗ್ರಹಿಸಿದ್ದು 3926 ಕಿಲೋ ಇ-ವೇಸ್ಟ್(ಇಲೆಕ್ಟ್ರಾನಿಕ್ ತ್ಯಾಜ್ಯ).
ಪ್ರಕೃತಿ ಮತ್ತು ಜೀವಜಾಲಕ್ಕೆ ಮಾರಕವಾಗಿರುವ ಅನೇಕ ಕಚ್ಚಾವಸ್ತುಗಳನ್ನು ಹೊಂದಿರುವ ಇಲೆಕ್ಟ್ರಾನಿಕ್ ತ್ಯಾಜ್ಯಗಳನ್ನು ಪರಿಣಾಮಕಾರಿಯಾಗಿ ಪರಿಷ್ಕರಿಸುವ ಯೋಜನೆ ಅಂಗವಾಗಿ ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳು, ಸರಕಾರಿ ಕಚೇರಿಗಳು, ಜಿಲ್ಲಾಧಿಕಾರಿ ಕಚೇರಿ ಇತ್ಯಾದಿ ಕಡೆಗಳಿಂದ ಇ-ವೇಸ್ಟ್ ಸಂಗ್ರಹಮಾಡಲಾಗಿತ್ತು. ಎರಡು ವರ್ಷ ಅವಧಿಯಲ್ಲಿ ಮೂರನೇ ಬಾರಿ ಇಲೆಕ್ಟ್ರಾನಿಕ್ ವೇಸ್ಟ್ ಸಂಗ್ರಹಿಸಲಾಗಿದೆ. ಯೋಜನೆಗೆ ಸಹಕಾರ ನೀಡಿದ ನಗರಸಭೆಗಳು, ಪಂಚಾಯತ್ ಗಳು ಉಪಯೋಗರಹಿತ ಕಂಪ್ಯೂಟರ್, ಪ್ರಿಂಟರ್ ಇತ್ಯಾದಿ ವಿದ್ಯುನ್ಮಾನ ಉಪಕರಣಗಳು ಇತ್ಯಾದಿಗಳನ್ನು ಸಂಗ್ರಹ ಕೇಂದ್ರವಾಗಿರುವ ಜಿಲ್ಲಾಧಿಕಾರಿ ಕಚೇರಿಗೆ ತಲಪಿಸಿದ್ದುವು. ಇವುಗಳನ್ನು ಪರಿಷ್ಕರಣೆ ಏಜೆನ್ಸಿಯಾಗಿರುವ ಕ್ಲೀನ್ ಕೇರಳ ಕಂಪನಿ ನಿಗಮಕ್ಕೆ ಹಸ್ತಾಂತರಿಸಲಾಗಿದೆ.
ಜಿಲ್ಲಾಧಿಕಾರಿ ಕಚೇರಿಯಿಂದ ಈ-ವೇಸ್ಟ್ ಸಹಿತ ಹೈದರಾಬಾದ್ ನ ಪರಿಷ್ಕರಣೆ ಘಟಕಕ್ಕೆ ಹೊರಟ ಕ್ಲೀನ್ ಕೇರಳ ಕಂಪನಿಯ ವಾಹನಕ್ಕೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಹಸುರುನಿಶಾನೆ ತೋರಿದರು. ಚೆಂಗಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾಹಿನಾ ಸಲೀಂ, ಜಿಲ್ಲಾ ಶುಚಿತ್ವ ಮಿಷನ್ ಸಂಚಾಲಕ ಬಿ.ರಾಧಾಕೃಷ್ಣನ್, ಸಹಾಯಕ ಅಭಿವೃದ್ಧಿ ಕಮೀಷನರ್(ಜನರಲ್) ಬೆವಿನ್ ಜೋನ್, ಸಹಾಯಕ ಅಭಿವೃದ್ಧಿ ಕಮೀಷನರ್(ಪಿಒ)ಎನ್.ಹರಿಲಾಲ್, ಕಾರ್ಯಕ್ರಮ ಅಧಿಕಾರಿ ಕೆ.ವಿ.ರಂಜಿತ್ ಮೊದಲಾದವರು ಉಪಸ್ಥಿತರಿದ್ದರು.