ಕಾಸರಗೋಡು: ಪ್ರಧಾನಿ ಕೃಷಿ ಸಿಂಚಾಯಿ ಯೋಜನೆಯ ನದಿದಡ ನಿರ್ಮಾಣ ಘಟಕದಡಿ ಕಾರಡ್ಕ ಬ್ಲೋಕ್ಪಂಚಾಯತ್ ವ್ಯಾಪ್ತಿಯಲ್ಲಿ ಜಾರಿಗೊಳಿಸಲಾಗುತ್ತಿರುವ ಯೋಜನೆಗಾಗಿ ವಾಟರ್ಶೆಡ್ ಡೆವಲಪ್ಮೆಂಟ್ ಟೀಂ ಇಂಜಿನಿಯರ್ ಹುದ್ದೆಗಾಗಿ ಸಂದರ್ಶನ ನಡೆಯಲಿದೆ. ಡಿ.7ರಂದು ಬೆಳಗ್ಗೆ 10.30ಕ್ಕೆ ಜಿಲ್ಲಾ ಪಂಚಾಯತ್ ಕಚೇರಿಯ ಬಡತನ ನಿವಾರಣೆ ವಿಭಾಗ ಕಚೇರಿಯಲ್ಲಿ ಸಂದರ್ಶನ ಜರುಗುವುದು.
2019 ಮಾರ್ಚ್ ವರೆಗಿನ ಕಾಲಾವಧಿಗಾಗಿ ಕರಾರು ರೂಪದಲ್ಲಿ ನೇಮಕಾತಿ ನಡೆಯಲಿದೆ.