ಕಾಸರಗೋಡು : ರಾಷ್ಟ್ರಕ್ಕಾಗಿ ಬಲಿದಾನಗೊಂಡ ಸೈನಿಕರಿಗೆ ಗೌರವಾರ್ಪಣೆ ನಡೆಸುವ ನಿಟ್ಟಿನಲ್ಲಿ ಡಿ.7ರಂದು ಸಶಸ್ತ್ರದಳ ಧ್ವಜದಿನಾಚರಣೆ ನಡೆಯಲಿದೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಂದು ಬೆಳಗ್ಗೆ
10.30ಕ್ಕೆ ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸುವರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸುವರು. ಜಿಲ್ಲಾ ಸೈನಿಕ ಮಂಡಳಿ ಉಪಾಧ್ಯಕ್ಷ ಬ್ರಿಗೇಡಿಯರ್ ಟಿ.ಸಿ.ಅಬ್ರಾಹಂ ಪ್ರಧಾನ ಭಾಷಣ ಮಾಡುವರು. ಜಿಲ್ಲಾ ಮಾಹಿತಿ ಕೇಂದ್ರ ಅಧಿಕಾರಿ ರಶೀದ್ಬಾಬು, ಜಿಲ್ಲಾ ಸೈನಿಕ ಕಲ್ಯಾಣ ಅಧಿಕಾರಿ ಜೋಸ್ ಟೋಮ್ಸ್, ಸಹಕಾರಿ ಇಲಾಖೆ ಜತೆ ರೆಜಿಸ್ತ್ರಾರ್ ಮಹಮ್ಮದ್ ನೌಷಾದ್, ಕೆಎಸ್ಇಎಸ್ಎಲ್ ಅಧ್ಯಕ್ಷ ಕೆ.ನಾರಾಯಣನ್ ನಾಯರ್, ವಿ.ವಿ.ಪದ್ಮನಾಭನ್,
ಪಿ.ಪಿ.ಸಹದೇವನ್,
ಪಿ.ರಾಜೀವ್,
ಅಭಿವೃದ್ಧಿ ವ್ಯವಸ್ಥಾಪಕ ಪಿ.ಚಂದ್ರನ್ ಮೊದಲಾದವರು ಉಪಸ್ಥಿತರಿರುವರು.
ಕೇರಳ ಸರಕಾರ, ಸೈನಿಕ ಕಲ್ಯಾಣ ಇಲಾಖೆ ಜಂಟಿಯಾಗಿ ಜಾರಿಗೊಳಿಸುವ ವಿವಿಧ ವಿಶ್ರಾಂತಸೈನಿಕ ಕಲ್ಯಾಣ ಚಟುವಟಿಕೆಗಳ ಕುರಿತು ಜಾಗೃತಿ ವಿಚಾರಸಂಕಿರಣ ಈ ಸಮಾರಂಭ ಅಂಗವಾಗಿ ಜರುಗಲಿದೆ. ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಕೆ.ಸ್ನೇಹಲತಾ,
ಜಿಲ್ಲಾ ಸೈನಿಕ ಕಲ್ಯಾಣ ಅಧಿಕಾರಿ ಜೋಸ್ ಟೋಸ್ ಉಪನ್ಯಾಸ ನಡೆಸುವರು.
ಎಸ್ಎಸ್ಎಲ್ಸಿ ಮತ್ತು ಪ್ಲಸ್ಟು ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ ನಡೆಯಲಿದೆ. ಅಂದು ಬೆಳಗ್ಗೆ 10.20ಕ್ಕೆ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಪುಷ್ಪಚಕ್ರ ಸಮರ್ಪಣೆ ನಡೆಯಲಿದೆ.