ಡಿ.9 ರಂದು ಕೂಟ ಮಹಾಜಗತ್ತು 150 ನೇ ಸಂಪರ್ಕ ಸಭೆ, ಭಜನಾ ಕಾರ್ಯಕ್ರಮ
0
ಡಿಸೆಂಬರ್ 05, 2018
ಮಧೂರು: ಕೂಟ ಮಹಾಜಗತ್ತು ಸಾಲಿಗ್ರಾಮ ಇದರ ಕಾಸರಗೋಡು ಅಂಗಸಂಸ್ಥೆಯ 150 ನೇ ಸಂಪರ್ಕ ಸಭೆ ಹಾಗು ಭಜನಾ ಕಾರ್ಯಕ್ರಮಗಳು ಡಿ.9 ರಂದು ಎಲ್ಲಂಗಳದ ವಾಸುದೇವ ಹೊಳ್ಳ ಅವರ ಮನೆಯಲ್ಲಿ ಜರಗಲಿದ್ದು, ಎಲ್ಲಾ ಕೂಟ ಬಂಧುಗಳು ಭಾಗವಹಿಸಬೇಕಾಗಿ ಮಧೂರಿನ ಕೊಲ್ಯದ ರಾಮ ನಾವಡರ ಮನೆಯಲ್ಲಿ ಜರಗಿದ ಸಭೆಯಲ್ಲಿ ಕಾಸರಗೋಡು ಅಂಗಸಂಸ್ಥೆಯ ಅಧ್ಯಕ್ಷ ಎಸ್.ಎನ್.ಮಯ್ಯ ಬದಿಯಡ್ಕ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪೂಜಾ ಕೈಂಕರ್ಯಗಳು, ವಿವಿಧ ಅಂಗಸಂಸ್ಥೆಯ ಸದಸ್ಯರಿಂದ ಭಜನಾ ಸಂಕೀರ್ತನೆ ನಡೆಯಲಿದೆ. ನರಹರಿ ಮಾಸ್ತರ್ ಕಳತ್ತೂರು ಧಾರ್ಮಿಕ ಭಾಷಣ ಮಾಡುವರು. ಅಂಗಸಂಸ್ಥೆಯ ನಿಕಟಪೂರ್ವ ಕಾರ್ಯದರ್ಶಿ ಖ್ಯಾತ ಸಂಘಟಕ ನರಸಿಂಹರಾಜ ಮಾಸ್ತರ್ ಅವರಿಗೆ ಸಮ್ಮಾನ, ಕೈಪಿಡಿಯ ಬಿಡುಗಡೆ, 2019 ರ ಕ್ಯಾಲೆಂಡರ್ ಬಿಡುಗಡೆ ಇನ್ನಿತರ ಕಾರ್ಯಕ್ರಮಗಳು ನಡೆಯಲಿದೆ ಎಂದು ಕಾರ್ಯದರ್ಶಿ ನರಸಿಂಹ ಮಯ್ಯ ಮಾಹಿತಿ ನೀಡಿದರು.
ಸಭೆಯಲ್ಲಿ ನೀರಾಳ ಕೃಷ್ಣ ಹೊಳ್ಳ, ಚಂದ್ರಶೇಖರ ರಾವ್ ಏತಡ್ಕ, ನಿರ್ಮಲಾ ಜಿ.ತುಂಗ, ಬನ್ನೂರು ರಾಜ ಎಂ.ಜಿ. ಏರಿಕ್ಕಳ, ರಾಜೇಶ್ ಬಿ.ಬನ್ನೂರು, ಶ್ರೀಹರಿ ಮತ್ತಿತರರು ಭಾಗವಹಿಸಿದರು. ಕೃಷ್ಣ ಪ್ರಸಾದ್ ಅಡಿಗ ಸ್ವಾಗತಿಸಿ, ಬಿ.ಕೃಷ್ಣ ಕಾರಂತ ವಂದಿಸಿದರು.