ಡಿ.9 ರಂದು ಹಿಂದೂ ಐಕ್ಯವೇದಿಕೆಯ ಮಧೂರು ಪಂಚಾಯತಿ ಮಟ್ಟದ ಮಹಾಸಭೆ
0
ಡಿಸೆಂಬರ್ 03, 2018
ಮಧೂರು: ಹಿಂದೂ ಐಕ್ಯವೇದಿಕೆಯ ಮಧೂರು ಪಂಚಾಯತಿ ಮಟ್ಟದ ಮಹಾಸಭೆಯು ಡಿ.9 ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ಪರಕ್ಕಿಲ ಶ್ರೀ ಮಹಾದೇವ ಕ್ಷೇತ್ರ ಪರಿಸರದಲ್ಲಿ ಜರಗಲಿದೆ.
ಸಭೆಯಲ್ಲಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಮಧೂರು ಮತ್ತು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅನುಗ್ರಹ ಭಾಷಣ ಮಾಡುವರು. ಐಕ್ಯ ವೇದಿಕೆಯ ಜಿಲ್ಲಾ, ತಾಲೂಕು ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡುವರು. ಪಂಚಾಯತಿ ಮಟ್ಟದ ಸಮಿತಿಯನ್ನು ರೂಪೀಕರಿಸಲಾಗುವುದು. ಪಂಚಾಯತಿ ಮಟ್ಟದ ಎಲ್ಲ ಹಿಂದೂ ಕಾರ್ಯಕರ್ತರು ಭಾಗವಹಿಸುವಂತೆ ಪ್ರಕಟನೆಯಲ್ಲಿ ತಿಳಿಸಲಾಗಿದೆ.