ಬಹುಮಾನಕ್ಕೆ ಅರ್ಜಿ ಆಹ್ವಾನ
0
ಡಿಸೆಂಬರ್ 05, 2018
ಕಾಸರಗೋಡು: ಕೇರಳ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾರ್ಮಿಕ ಕಲ್ಯಾಣನಿಧಿ ಯೋಜನೆಯಲ್ಲಿ ಸದಸ್ಯರಾಗಿರುವವರ ಮಕ್ಕಳಲ್ಲಿ 2017-18 ಶಿಕ್ಷಣ ವರ್ಷದಲ್ಲಿ ಪದವಿ, ಸ್ನಾತಕೋತ್ತರ ಪದವಿ , ತಾಂತ್ರಿಕ ತರಬೇತಿಗಳಲ್ಲಿ ಶೇ 60ಕ್ಕಿಂತ ಕಡಿಮೆಯಿಲ್ಲದ ಅಂಕಗಳಿಸಿದವರಿಗೆ ನಗದು ಬಹುಮಾನ ನೀಡುವ ಯೋಜನೆಯಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಅಂಕಪಟ್ಟಿ, ಅರ್ಹತಾಪತ್ರಗಳ ದೃಡೀಕರಿಸಿದ ನಕಲು ಸಹಿತ ಡಿ.22ರ ಮುಂಚಿತವಾಗಿ ಜಿಲ್ಲಾ ಕಾರ್ಯಕಾರಿ ಅಧಿಕಾರಿ ಕಚೇರಿ, ಶಾಪ್ ಆಂಡ್ ಕಮರ್ಶಿಯಲ್ ಎಸ್ಟಾಬ್ಲಿಶ್ಮೆಂಟ್ ಬೋರ್ಡ್, ಸಾಂಡಲ್ ಸಿಟಿ ಬಿಲ್ಡಿಂಗ್, ವಿದ್ಯಾನಗರ ಅಂಚೆ, ಕಾಸರಗೋಡು ಎಂಬ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು. ಮಾಹಿತಿಗೆ ದೂರವಾಣಿ ಸಂಖ್ಯೆ 04994-255110.