ಕಾಸರಗೋಡು:
ಜಿಲ್ಲೆಯಲ್ಲಿ ಅರ್ಹರಾದ ಎಲ್ಲ ವಿಕಲಚೇತನರನ್ನೂ ಮತದಾತರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಮತ್ತು ಅವರಿಗೆ ಸುಗಮವಾಗಿ ಮತದಾನ ನಡೆಸುವ ವ್ಯವಸ್ಥೆ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಮೋನಿಟರಿಂಗ್ ಸಮಿತಿ ರಚಿಸಲಾಗಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷರಾಗಿರುವ ಸಮಿತಿಯಲ್ಲಿ ಜಿಲ್ಲೆಯ ಇತರ ಇಲಾಖೆಗಳ ಹಿರಿಯ ಅಧಿಕಾರಿಗಳು ಸೇರಿದ್ದಾರೆ.
ದೃಷ್ಟಿಹೀನರಿಗೆ ಮತದಾನ ಸುಲಭಗೊಳಿಸುವ ನಿಟ್ಟಿನಲ್ಲಿ ಈಗಿರುವ ಸೌಲಭ್ಯಗಳಲ್ಲದೆ, ಬ್ರೈಲ್ ಲಿಪಿಯಲ್ಲಿ ಡಮ್ಮಿ ಬ್ಯಾಲೆಟ್ ಶೀಟ್ ಸಿದ್ಧಗೊಳಿಸಲಾಗುವುದು. ಈ ಸಂಬಂಧ ಪ್ರಚಾರ ಈಗಾಗಲೇ ಚುನಾವಣಾ ಆಯೋಗ ನಡೆಸುತ್ತಿದ್ದು, 2019ರ ಲೋಕಸಭೆ ಚುನಾವಣೆ ಮುಗಿಯುವ ವರೆಗೆ ನಡೆಯಲಿದೆ. ವಿಕಲಚೇತನರು ಮತಗಟ್ಟೆಗಳಿಗೆ ಆಗಮಿಸಲು ವಾಹನ ಸೌಲಭ್ಯ, ಬೂತ್ಗಳಲ್ಲಿ ರ್ಯಾಂಪ್ ಸಹಿತ ಸೌಲಭ್ಯ ಏರ್ಪಡಿಸಲು ನಿರ್ಧಿಸಲಾಗಿದೆ. ತಹಸೀಲ್ದಾರರ ವ್ಯಾಪ್ತಿಯಲ್ಲಿ ಚಟುವಟಿಕೆ ನಡೆಸುವ ಚುನಾವಣೆ ವಿಭಾಗ ನೌಕರರು ಮನೆಗಳಿಗೆ ಆಗಮಿಸಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸುವ ವ್ಯವಸ್ಥೆ ಮಾಡಲಿದ್ದಾರೆ.
ಎಲ್ಲ ವಿಕಲಚೇತನರ ಹೆಸರು ಮತದಾರ ಪಟ್ಟಿಯಲ್ಲಿ ಸೇರ್ಪಡೆಗೆ ವ್ಯವಸ್ಥೆ
0
ಡಿಸೆಂಬರ್ 03, 2018