HEALTH TIPS

ಮಹಿಳಾ ಗೋಡೆ-ಮೈತ್ರಿ ಆಡಳಿತ ನಡೆಸುವಲ್ಲಿ ಯುಡಿಎಫ್ ನಿಲುವು ಸ್ಪಷ್ಟಪಡಿಸಲಿ-ಮಣಿಕಂಠ ರೈ ಪಟ್ಲ


 
     ಕುಂಬಳೆ: ಕೇರಳ ಸರಕಾರ ಜ.1 ರಂದು ರಾಜ್ಯ ವ್ಯಾಪಕವಾಗಿ ಹಮ್ಮಿಕೊಂಡಿರುವ ಮಹಿಳಾ ಗೋಡೆ ಕಾರ್ಯಕ್ರಮಕ್ಕೆ ನಿರೀಕ್ಷಿತ ಸ್ಪಂಧನೆ ಜನರಿಂದ ಲಭ್ಯವಾಗದ ಕಾರಣ ಇದೀಗ ಉದ್ಯೋಗ ಖಾತರೀ ಕಾರ್ಮಿಕರು ಮತ್ತಿತರನ್ನು ಬಲವಂತದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗುತ್ತಿರುವುದು ಕಂಡುಬರುತ್ತಿದೆ. ಇದಕ್ಕಾಗಿ ಸ್ಥಳೀಯ ಗ್ರಾ.ಪಂ. ಆಡಳಿತವನ್ನು ಬಳಸಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪೈವಳಿಕೆ ಮತ್ತು ಎಣ್ಮಕಜೆ ಗ್ರಾ.ಪಂ. ಗಳಲ್ಲಿ ಸಿಪಿಎಂ ಮತ್ತು ಯುಡಿಎಫ್ ಮೈತ್ರಿ ಕೂಟವು ಆಡಳಿತ ನಡೆಸುತ್ತಿದ್ದು, ಇಲ್ಲಿ ಯುಡಿಎಫ್ ನಿಲುವು ಏನು ನಿಲುವು ತಳೆಯಲಿದೆ ಎಂದು ಅದು ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಮಂಜೇಶ್ವರ ಮಂಡಲ ಕಾರ್ಯದರ್ಶಿ ಮಣಿಕಂಠ ರೈ ಪಟ್ಲ ಮಾಧ್ಯಮ ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.
   ಶಬರಿಮಲೆ ಪ್ರವೇಶಕ್ಕೆ ಮಹಿಳೆಯರ ಪರವಾಗಿ ಪರಮೋಚ್ಚ ನ್ಯಾಯಾಲಯವು ನೀಡಿದ್ದ ತೀರ್ಪಿನ ಹಿನ್ನೆಲೆಯಲ್ಲಿ ಮಹಿಳಾ ಸಬಲೀಕರಣದ ಉದ್ದೇಶಕ್ಕಾಗಿ ಮಹಿಳಾ ಗೋಡೆ ಎಂಬ ಕಾರ್ಯಕ್ರಮದ ಮೂಲಕ ತೆರೆಮರೆಯಲ್ಲಿ ಬೇರೇನನ್ನೋ ಲಕ್ಷ್ಯವಿರಿಸಿ ನಡೆಸಲು ರಾಜ್ಯಾಡಳಿತ ನಡೆಸುತ್ತಿರುವ ಎಲ್‍ಡಿಎಫ್ ಮುಂದಾಗಿದೆ. ಆದರೆ ಈ ಯೋಜನೆಯ ಮರ್ಮವನ್ನರಿತು ಮಹಿಳೆಯರೇ ಹಿಂದೆ ಸರಿದಿರುವುದರಿಂದ ಬೆಂಬಲದ ಕೊರತೆಯ ಕಾರಣ ಸರಕಾರ ಕಂಗಾಲಾಗಿದೆ. ಆದುದರಿಂದ ಮುಖ ಉಳಿಸಲು ಕುಟುಂಬಶ್ರೀ, ಅಂಗನವಾಡಿ ಕಾರ್ಯಕರ್ತೆಯರು, ಉದ್ಯೋಗ ಖಾತರೀ ಕಾರ್ಯಕರ್ತೆಯರನ್ನು ವಿವಿಧ ಕಾರಣಗಳನ್ನು ನೀಡಿ ಬೆದರಿಸಿ ಮಹಿಳಾ ಹೋಡೆ ಕಾರ್ಯಕ್ರಮ ಯಶಸ್ವಿಗೆ ಬಳಸಿಕೊಳ್ಳಲು ಎಲ್‍ಡಿಎಫ್ ನ ನಡೆದಿದೆ ಎಂದು ಅವರು ಆರೋಪಿಸಿರುವರು.
    ಮಹಿಳಾ ಗೋಡೆಗೆ ರಾಜ್ಯಮಟ್ಟದಲ್ಲಿ ಯುಡಿಎಫ್  ಎಲ್‍ಡಿಎಫ್ ನಿಲುವುಗಳ ವಿರುದ್ದ, ಶಬರಿಮಲೆ ಘಟನೆಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಸಿಪಿಎಂ ನೊಂದಿಗೆ ಜೊತೆಯಾಗಿ ಆಡಳಿತ ಹಂಚಿಕೊಂಡಿರುವ  ಪೈವಳಿಕೆ ಮತ್ತು ಎಣ್ಮಕಜೆ ಗ್ರಾ.ಪಂ. ಗಳಲ್ಲಿ ಯುಡಿಎಫ್ ತನ್ನ ನಿಲುವನ್ನು ಜನರಿಗೆ ಸ್ಪಷ್ಟಪಡಿಸುವ ಅಗತ್ಯವಿದೆ. ತನ್ನ ಇಬ್ಬಗೆಯ ರಾಜಕೀಯ ತಂತ್ರಗಾರಿಕೆಗಳಿಗೆ, ಜನರ ಮೇಲೆ ಒತ್ತಡಹೇರಿ ಅಧಿಕಾರ ದುರುಪಯೋಗ ಪಡಿಸಿವ ಎಲ್‍ಡಿಎಫ್‍ನೊಂದಿಗೆ ಸಂದರ್ಭಾನುಸಾರ ವರ್ತಿಸುವ ಯುಡಿಎಫ್ ನಿಲುವು ಸ್ಪಷ್ಟಪಡಿಸಬೇಕು ಎಂದು ಮಣಿಕಂಠ ರೈ ಪಟ್ಲ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries