ಪ್ರಮೋಟರ್ ಹುದ್ದೆಗೆ ನೇಮಕಾತಿ
0
ಡಿಸೆಂಬರ್ 05, 2018
ಕಾಸರಗೋಡು: ಜಿಲ್ಲೆಯ ಗ್ರಾಮಪಂಚಾಯತ್ಗಳ ಮತ್ತು ನಗರಸಭೆಗಳಲ್ಲಿ ಬರಿದಾಗಿರುವ ಪರಿಶಿಷ್ಟ ಜಾತಿ ಪ್ರಮೋಟರ್ ಹುದ್ದೆಗೆ ನೇಮಕಾತಿ ನಡೆಯಲಿದೆ. ಈ ಜಾತಿಗೆ ಸೇರಿದ ಅರ್ಹ ಯುವಕ-ಯುವತಿಯರಿಂದ ಅರ್ಜಿ ಕೋರಲಾಗಿದೆ. ಬೆಳ್ಳೂರು, ಕುಂಬಡಾಜೆ, ಕಾರಡ್ಕ, ತ್ರಿಕರಿಪುರ ಗ್ರಾಮಪಂಚಾಯತ್ ಗಳಲ್ಲಿ ಮತ್ತು ನೀಲೇಶ್ವರ ನಗರಸಭೆಯಲ್ಲಿರುವ ಹುದ್ದೆಗಳಿಗಾಗಿ ನೇಮಕಾತಿ ನಡೆಯಲಿದೆ. 18ರಿಂದ 40 ವರ್ಷ ಪ್ರಾಯದವರಾಗಿರುವ , ಪಿಡಿಸಿ/ಪ್ಲಸ್ ಟು ತೇರ್ಗಡೆಹೊಂದಿದವರು ಅರ್ಜಿ ಸಲ್ಲಿಸಬೇಕು. ಹೆಚ್ಚುವರಿ ಶಿಕ್ಷಣಾರ್ಹತೆಯಿರುವವರಿಗೆ ಆದ್ಯತೆ ನೀಡಲಾಗುವುದು. ನಿಗದಿತ ಮಾದರಿಯ ಅರ್ಜಿಫಾರಂನಲ್ಲಿ ಜಾತಿ, ವಯಸ್ಸು, ಶಿಕ್ಷಣಾರ್ಹತೆ, ಶಾಶ್ವತ ವಿಳಾಸ, ಪಂಚಾಯತ್ ಇತ್ಯಾದಿ ನಮೂದಿಸಬೇಕು. ಅರ್ಹತಾಪತ್ರಗಳ ನಕಲು ಸಹಿತ ಡಿ.14ರ ಸಂಜೆ 5 ಗಂಟೆಗೆ ಮುಂಚಿತವಾಗಿ ಕಾಸರಗೋಡು ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಆಯ್ಕೆಯಾದವರಿಗೆ ಪ್ರತಿತಿಂಗಳು 7 ಸಾವಿರ ರೂ. ಗೌರವಧನ ಲಭಿಸಲಿದೆ. ಸ್ಥಳೀಯರನ್ನು ಮಾತ್ರ ಈ ನಿಟ್ಟಿನಲ್ಲಿ ಪರಿಶೀಲಿಸಲಾಗುವುದು. ಒಂದೊಮ್ಮೆ ಒಂದು ಸ್ಥಳೀಯಾಡಳಿತೆ ಸಂಸ್ಥೆ ವ್ಯಾಪ್ತಿಯಲ್ಲಿ ಅರ್ಹರಿಲ್ಲದೇ ಇದ್ದರೆ ಸಮೀಪದ ಸಂಸ್ಥೆ ವ್ಯಾಪ್ತಿಯ ಮಂದಿಯ ಅರ್ಜಿ ಪರಿಶೀಲನೆ ನಡೆಯಲಿದೆ. ಹಿಂದೆ ಪ್ರಮೋಟರ್ ರಾಗಿ ಚಟುವಟಿಕೆ ನಡೆಸುತ್ತಿದ್ದ ವೇಳೆ ಭೃಷ್ಟಾಚಾರ ನಿರ್ಮೂಲನ ದಳದ (ವಿಜಿಲೆನ್ಸ್)ಯಾವುದಾದರೂ ಪ್ರಕರಣದಲ್ಲಿ ಸಿಲುಕಿದ್ದವರು, ಕಾನೂನು ಕ್ರಮಕ್ಕೆ ಒಳಗಾಗಿ ಹೊಣೆಯಿಂದ ತಿರಸ್ಕರಿಸಲಾಗಿದ್ದವರು ಅರ್ಜಿ ಸಲ್ಲಿಸದರೆ ಪರಿಶೀಲಿಸುವುದಿಲ್ಲ. ಅರ್ಜಿ ಮಾದರಿ ಮತ್ತು ಮಾಹಿತಿಗಾಗಿ ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಕಚೇರಿ, ಬ್ಲೋಕ್/ನಗರಸಭೆ ಪರಿಶಿಷ್ಟ ಜಾತಿ ಅಭಿವೃದ್ಧಿ ಕಚೇರಿಗಳನ್ನು ಸಂರ್ಕಿಸಬಹುದು. ಮಾಹಿತಿಗೆ ದೂರವಾಣಿ ಸಂಖ್ಯೆ 04994-256162.