ಮುಳ್ಳೇರಿಯ: ಕಾಗದದ ಬ್ಯಾಗ್ ಮತ್ತು ಬಟ್ಟೆಯ ಚೀಲ ನಿರ್ಮಾಣ ನಡೆಸಿ, ಮಾರಾಟ ಮಾಡಿ ಲಭಿಸಿದ (5 ಸಾವಿರ ರೂ.)ಮೊಬಲಗನ್ನು ರಾಜ್ಯ ಜಲದುರಂತ ಪರಿಹಾರ ನಿಧಿಗೆ ನೀಡುವ ಮೂಲಕ ಮುಳ್ಳೇರಿಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮಾದರಿಯಾಗಿದ್ದಾರೆ.
ಹರಿತ ಕೇರಳಂ ಮಿಷನ್‍ನ ಯೋಜನೆ ಪ್ರಕಾರ ಈ ಚಟುವಟಿಕೆ ನಡೆದಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ಮೊಬಲಗನ್ನು ಹಸ್ತಾಂತರಿಸಲಾಯಿತು. ಹರಿತ ಕೇರಳ ಮಿಷನ್ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್, ಶಾಲೆಯ ಮುಖ್ಯಶಿಕ್ಷಕ ಅಶೋಕ ಅರಳಿತ್ತಾಯ, ಸಾವಿತ್ರಿ ಟೀಚರ್, ವಿದ್ಯಾರ್ಥಿಗಳಾದ ಅಖಿಲ, ಸುಕೇಶ್, ಪೂರ್ಣೇಶ್, ನಿವೇದ್,ಕ್ಷೇಮ ಮೊದಲಾದವರು ಉಪಸ್ಥಿತರಿದ್ದರು.