ಕುಂಬಳೆ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಮುಂದಿನ ಫೆ.18 ರಿಂದ 24ರ ವರೆಗೆ ಜರಗಲಿರುವ ವಿಶ್ವಜಿತ್ ಅತಿರಾತ್ರ ಸೋಮಯಾಗದ ಪ್ರಚಾರಾರ್ಥ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಅಭಿಯಾನದ ರಥಯಾತ್ರೆಗೆ ಪೆರ್ಮುದೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ಸ್ವಾಗತ ನೀಡಲಾಯಿತು.
ಶ್ರೀ ಹರಿನಾರಾಯಣ ಮಯ್ಯರವರ ನೇತೃತ್ವದಲ್ಲಿ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಿತು.ಬಳಿಕ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ತಮ್ಮ ಆಶೀರ್ಚಚನದಲ್ಲಿ ಯಾಗದ ಮಹತ್ವವನ್ನು ವಿವರಿಸಿ ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೆಕೆಂದು ಕರೆನೀಡಿದರು.
ಪ್ರಮುಖರಾದ ಹರೀಶ್ ಶೆಟ್ಟಿ ಮಾಡ,ಕಿಶೋರ್ ಪೆರ್ಮುದೆ,ರಾಮಚಂದ್ರ ಆಚಾರ್ಯ ಪೆರ್ಮುದೆ,ಎಸ್.ಸೀತಾರಾಮ ಶೆಟ್ಟಿ,ಅಚ್ಯುತ ಚೇವಾರ್ ಮುಂತಾದವರು ಉಪಸ್ಥಿತರಿದ್ದರು.