ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ: ಅಮೃತಾ ಎಸ್.ನಾಯರ್ ಪ್ರಥಮ
0
ಡಿಸೆಂಬರ್ 04, 2018
ಕಾಸರಗೋಡು: ಗಣರಾಜ್ಯೋತ್ಸವ ಅಂಗವಾಗಿ ನೆಹರೂಯುವಕೇಂದ್ರ ವತಿಯಿಂದ ಯುವಜನತೆಗಾಗಿ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ನಡೆಸಲಾದ "ರಾಷ್ಟ್ರಭಕ್ತಿ ಮತ್ತು ರಾಷ್ಟ್ರನಿರ್ಮಾಣ' ಎಂಬ ವಿಷಯದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ನೀಲೇಶ್ವರದ ಅಮೃತಾ ಎಸ್.ನಾಯರ್ ಪ್ರಥಮ ಬಹುಮಾನ ಪಡೆದರು. ಕಾರಡ್ಕದ ಮಹಮ್ಮದ್ ಸಿಯಾದ್ ದ್ವಿತೀಯ ಮತ್ತು ಎರಿಯಾಲ್ನ ಅಫ್ಶೀರ್ ತೃತೀಯ ಬಹುಮಾನ ಪಡೆದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ವಿಜೇತರಿಗೆ ಬಹುಮಾನ ವಿತರಿಸಿದರು.
ಪ್ರಥಮ ಬಹುಮಾನ ರೂಪದಲ್ಲಿ 5 ಸಾವಿರ ರೂ., ದ್ವಿತೀಯ ಬಹುಮಾನ 2 ಸಾವಿರ ರೂ., ತೃತೀಯ ಬಹುಮಾನ ಒಂದು ಸಾವಿರ ರೂ. ಇದ್ದು, ಅರ್ಹತಾಪತ್ರವೂ ದೊರೆತಿದೆ. ಬಹುಮಾನ ವಿತರಣೆ ಸಮಾರಂಭದಲ್ಲಿ ನೆಹರೂ ಯುವ ಕೇಂದ್ರ ಜಿಲ್ಲಾ ಸಂಚಾಲಕ ಎಂ.ಅನಿಲ್ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಡಿ.8ರಂದು ತ್ರಿಶೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಗೆ ಅಮೃತಾ ಜಿಲ್ಲೆಯ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.
ಬೆಳಗ್ಗೆ ನಡೆದ ಸಮಾರಂಭವನ್ನು ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್ ಉದ್ಘಾಟಿಸಿದರು. ಡಾ.ಆರ್.ರಾಜೇಶ್, ಕೆ.ಶ್ರೀಲತಾ, ಮೈಮೂನಾ ಲತೀಫ್ ಮೊದಲಾದವರು ಉಪಸ್ಥಿತರಿದ್ದರು. ನೆಹರೂಯುವ ಕೇಂದ್ರ ಜಿಲ್ಲಾ ಕಾರ್ಯಕ್ರಮ ಸಂಚಾಲಕ ಶಾಫಿ ಸಲೀಂ ಸ್ವಾಗತಿಸಿದರು. ಟಿ.ನವೀನ್ ರಾಜ್ ವಂದಿಸಿದರು.