ಜಲಸಂರಕ್ಷಣೆ : ಕ್ರಿಯಾಯೋಜನೆ ರಚನೆ
0
ಡಿಸೆಂಬರ್ 05, 2018
ಕಾಸರಗೋಡು: ಜಲಸಂರಕ್ಷಣೆ ಯಜ್ಞ ಯೋಜನೆಯ ಯಶಸ್ಸಿಗಾಗಿ ಕ್ರಿಯಾಯೋಜನೆ ರಚಿಸಲಾಗಿದೆ. ನೀಲೇಶ್ವರ ಬ್ಲೋಕ್ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಯೋಜನೆ ರಚನೆ ನಡೆದಿದೆ. ಜಲಸಂರಕ್ಷಣೆ ಚಟುವಟಿಕೆಗಳಿಗಾಗಿ ಇಡೀ ವರ್ಷ ನೀರು ಲಭ್ಯವಾಗುವಂತೆ ಮತ್ತು ಜಲಾಶಯಗಳಲ್ಲಿ ನೀರಿನ ಪ್ರಮಾಣ ಸುಧಾರಿತಗೊಳಿಸುವಂತೆ ಬರಡಾಗಿರುವ ಜಾಗಗಳಲ್ಲಿ ಮತ್ತೆ ನೀರು ತುಂಬಿಕೊಳ್ಳುವಂತೆ ಮಾಡುವ ಉದ್ದೇಶದಿಂದ ಸಾರ್ವಜನಿಕ ಸಹಭಾಗಿತ್ವದೊಂದಿಗೆ ಈ ಯೋಜನೆಯನ್ನು ಬ್ಲೋಕ್ ಜಾರಿಗೊಳಿಸಲಿದೆ.
ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಲೆ, ಕಾಲೇಜು ವಿದ್ಯಾರ್ಥಿಗಳು, ಸ್ವಯಂಸೇವಾ ಸಂಘಟನೆಗಳು, ಕ್ಲಬ್ ಗಳ ಪದಾಧಿಕಾರಿಗಳು, ಸಹಕಾರಿ ಸಂಸ್ಥೆಗಳು, ಕೃಷಿ ಸಂಘಟನೆಗಳು, ಜನಪ್ರತಿನಿಧಿಗಳು ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು. ಬ್ಲೋಕ್ ವ್ಯಾಪ್ತಿಯ ನದಿ, ಹಳ್ಳ, ತೋಡು ಇತ್ಯಾದಿ ಜಲಾಶಯಗಳ ನವೀಕರಣ ನಡೆಸಿ ಜಲಸಮೃದ್ಧಿ ನಡೆಸಲು ನಿರ್ಧರಿಸಲಾಗಿದೆ.
ಬ್ಲೋಕ್ ಪಂಚಾಯತ್ ಉಪಾದ್ಯಕ್ಷ ಕೆ.ನಾರಾಯಣನ್ ಮಾಸ್ಟರ್ ಸಭೆ ಉದ್ಘಾಟಿಸಿದರು. ವಿವಿಧ ಗ್ರಾಮಪಂಚಾಯತ್ ಗಳ ಅಧ್ಯಕ್ಷರಾದ ಕೆ.ಶಕುಂತಲಾ, ಟಿ.ವಿ.ಶ್ರೀಧರನ್, ಪಿ.ಸಿ.ಫೌಸಿಯಾ, ಶುಚಿತ್ವ ಮಿಷನ್ ಜಿಲ್ಲಾ ಸಂಚಾಲಕ ರಾಧಾಕೃಷ್ಣನ್, ಹರಿತ ಕೇರಳ ಮಿಷನ್ ಸಂಚಾಲಕ ಸುಬ್ರಹ್ಮಣ್ಯನ್ ಮೊದಲಾದವರು ಉಪಸ್ಥಿತರಿದ್ದರು.
ಕೆ.ಸಂತೋಷ್ ಕುಮಾರ್ ಸ್ವಾಗತಿಸಿದರು. ಸಹಾಯಕ ಅಭಿವೃದ್ಧಿ ಕಮೀಷನರ್(ಜನರಲ್) ಬೆವಿನ್ ಜೋನ್ ವರ್ಗೀಸ್ ಪ್ರಾಸ್ತಾವಿಕ ಭಾಷಣ ಮಾಡಿದರು. ಪಿ.ಎಸ್.ಲಾಲು ವಂದಿಸಿದರು.