HEALTH TIPS

ಇತಿಹಾಸದಲ್ಲೇ ಮೊದಲ ಬಾರಿಗೆ ಒಲಿಂಪಿಕ್ಸ್ ಆಯೋಜನೆಗೆ ಅವಕಾಶ ಕೋರಿದ ಭಾರತ!

ನವದೆಹಲಿ: ಒಲಿಂಪಿಕ್ಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಎಂಬಂತೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ದೇಶದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜನೆಗೆ ಅವಕಾಶ ನೀಡುವಂತೆ ಮನವಿ ಮಾಡಿಕೊಂಡಿದೆ. ದೇಶಕ್ಕೆ ಒಲಿಂಪಿಕ್ ಕ್ರೀಡಾ ಕೂಟವನ್ನು ತರುವತ್ತ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ದಾಪುಗಾಲು ಇಟ್ಟಿದ್ದು, ಇದೇ ಮೊದಲ ಬಾರಿಗೆ ಮಹಾ ಕ್ರೀಡಾಕೂಟದ ಆಯೋಜನೆಗೆ ಅವಕಾಶ ನೀಡುವಂತೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆಯಲ್ಲಿ ಮನವಿ ಮಾಡಿಕೊಂಡಿದೆ. ಮೂಲಗಳ ಪ್ರಕಾರ 2032ರ ಒಲಿಂಪಿಕ್ ಕ್ರೀಡಾ ಕೂಟ ಆಯೋಜನೆಯ ಅವಕಾಶವನ್ನು ಭಾರತಕ್ಕೆ ನೀಡುವಂತೆ ಕೋರಿಕೆ ಸಲ್ಲಿಸಿರುವ ಐಒಎ ಇದಕ್ಕಾಗಿ ಭಾರತದ ಸರ್ಕಾರದ ಸಹಕಾರ ಕೂಡ ಕೋರಿದೆ. ಭಾರತಕ್ಕೆ ಅವಕಾಶ ನೀಡುವ ಕುರಿತು ಐಒಎ ಅಧ್ಯಕ್ಷ ನರಿಂದರ್ ಬಾತ್ರ ನೀಡಿದ ಸಲಹೆಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ(ಐಒಸಿ) ಮುಖ್ಯಸ್ಥ ಥಾಮಸ್ ಬ್ಯಾಚ್ ಅವರೂ ಸ್ವಾಗತಿಸಿದ್ದಾರೆ ಎನ್ನಲಾಗಿದೆ. 'ಭಾರತದಲ್ಲಿ 2032ರ ಒಲಿಂಪಿಕ್ ಆಯೋಜಿಸುವ ಬಗ್ಗೆ ನಾವು ತುಂಬಾ ಗಂಭೀರವಾಗಿ ಯೋಚಿಸುತ್ತಿದ್ದೇವೆ. ಕ್ರೀಡಾ ಕೂಟ ಆಯೋಜಿಸುವ ವಿಚಾರದಲ್ಲಿ ನಮಗಿರುವ ಆಸಕ್ತಿಯ ಬಗ್ಗೆ ನಾವು ಐಒಸಿಗೆ ಪತ್ರದ ಮೂಲಕ ತಿಳಿಸಿದ್ದೇವೆ. ಒಲಿಂಪಿಕ್ ಬಿಡ್ ಸಮಿತಿಯೊಂದಿಗೆ ನಾನು ಈಗಾಗಲೇ ಸಭೆ ನಡೆಸಿದ್ದೇನೆ. ಭಾರತದ ಆಸಕ್ತಿಯನ್ನು ಅವರು ಸ್ವಾಗತಿಸಿದ್ದಾರೆ. ಅಲ್ಲದೆ, ಆದಷ್ಟು ಶೀಘ್ರ ಭಾರತ ಕ್ರೀಡಾ ಕೂಟವನ್ನು ಆಯೋಜಿಸಬೇಕೆಂದು ಅವರೂ ಅಭಿಪ್ರಾಯಪಟ್ಟಿದ್ದಾರೆ ಎಂದು ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ತಿಳಿಸಿದ್ದಾರೆ. ಭಾರತದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಹೀಗೊಂದು ಪ್ರಸ್ತಾವನೆ ಸಲ್ಲಿಸಲಾಗುತ್ತಿದ್ದು, ದೆಹಲಿ ಅಥವಾ ಮುಂಬೈನಲ್ಲಿ ಕ್ರೀಡಾ ಕೂಟಕ್ಕೆ ಅವಕಾಶ ನೀಡುವಂತೆ ಕೋರಲಾಗಿದೆ. ಭಾರತದಂತೆಯೇ 2032ರ ಒಲಿಂಪಿಕ್ ಕೂಟ ಆಯೋಜಿಸಲು ಇಂಡೋನೇಷ್ಯಾ, ಜರ್ಮನಿ, ಚೀನಾ ಮತ್ತು ಆಸ್ಟ್ರೇಲಿಯಾ ತೀವ್ರ ಪ್ರಯತ್ನ ನಡೆಸುತ್ತಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries