ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 04, 2018
ಸಮರಸ ಸುವಿದ್ಯಾ!!
ಪ್ರೀತಿಯ ಸಮರಸ ಸುದ್ದಿ ಓದುಗರೇ,
ಈಗಾಗಲೇ ಹೇಳಿರುವಂತೆ ಸಮರಸ ಸುದ್ದಿ ಹೊಸತನದ ಆಶಯಗಳೊಂದಿಗೆ ಮುಂದಡಿಯಿಡುತ್ತಿದ್ದು, ಪ್ರಸ್ತುತ ಗಡಿನಾಡಿನ ಕನ್ನಡ ವಿದ್ಯಾರ್ಥಿಗಳ ಕಲಿಕಾ ಸಹಾಯಿಯಾಗಿ ಹತ್ತನೇ ತರಗತಿಯಲ್ಲಿ ವ್ಯಾಸಂಗಗೈಯ್ಯುತ್ತಿರುವ ವಿದ್ಯಾರ್ಥಿಗಳನ್ನು ಲಕ್ಷ್ಯವಾಗಿರಿಸಿ ಇಂದಿನಿಂದ ಪ್ರತಿನಿತ್ಯ ಒಂದು ಅಥವಾ ಎರಡು ವಿಷಯಗಳ ಮಾದರಿ ಪ್ರಶ್ನೋತ್ತರಿಗಳನ್ನು ಇಲ್ಲಿ ಸಮರಸ ಸುವಿದ್ಯಾ ಫಲಕದಡಿ ಪ್ರಕಟಿಸಲು ಉದ್ದೇಶಿಸಲಾಗಿದೆ.
ಹೊಸ ತಲೆಮಾರಿನ ತಾರುಣ್ಯದ ಯುವ ವಿದ್ಯಾರ್ಥಿಗಳಲ್ಲಿ ಸ್ಮಾರ್ಟ್ ಪೋನ್ ಇಲ್ಲದಿರದು. ಈ ಕಾರಣದಿಂದ ಬಹುಮಂದಿ ವಿದ್ಯಾರ್ಥಿಗಳಿಗೆ ಈ ವ್ಯವಸ್ಥೆ ಅನುಕೂಲವಾಗುವುದೆಂದು ನಮ್ಮ ನಂಬಿಕೆ.
ವಿದ್ಯಾರ್ಥಿ ಜೀವನದಲ್ಲಿ ಪ್ರತಿಯೊಂದು ಘಳಿಗೆಗಳೂ ಭವಿಷ್ಯ ನಿರೂಪಣೆಯಲ್ಲಿ ಮಹತ್ವದ್ದಾಗಿದ್ದು, ಅದರಲ್ಲೂ ಹತ್ತನೇ ತರಗತಿ ಅತ್ಯಮೂಲ್ಯ. ಈ ಹಂತವನ್ನು ಯಶಸ್ವಿಯಾಗಿ ಮುನ್ನಡೆಸಿದರೆ ಮುಂದಿರುವುದು ಸುಲಭ-ಸೌಖ್ಯದ ದಾರಿಗಳು. ಆದರೆ ಗಡಿನಾಡು ಕಾಸರಗೋಡಿನ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ತರಗತಿಯ ಪಠ್ಯಗಳ ಅಭ್ಯಾಸಗಳಿಗೆ, ಪರೀಕ್ಷೆಗಳ ನಿರ್ವಹಣೆಯಲ್ಲಿ ಹಲವು ಸೌಕರ್ಯಗಳ ಕೊರತೆಯಿಂದ ನಲುಗುತ್ತಿರುವುದು ಇಂದು ನಿನ್ನೆಯದಲ್ಲ. ಶಿಕ್ಷಕರು ಸೀಮಿತ ಅವಧಿಯಲ್ಲಿ ಮಾರ್ಗದರ್ಶನ-ಪಠ್ಯ ಬೋಧನೆ ನಿರ್ವಹಿಸುತ್ತಿದ್ದರೂ ಹಲವೊಂದು ಆಕರಗಳನ್ನು ತಲಪುವಲ್ಲಿ ಸಮಸ್ಯೆಗಳು ತಲೆದೋರಿದೆ. ಇತರ ಮಾಧ್ಯಮಗಳ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಿರ್ವಹಿಸುವಲ್ಲಿ ಸಾಕಷ್ಟು ಪೂರಕ ವ್ಯವಸ್ಥೆಗಳೂ ಲಭ್ಯವಾಗುತ್ತಿವೆ ಎನ್ನುವುದೂ ಗಮನಾರ್ಹ.
ಈ ಹಿನ್ನೆಲೆಯಲ್ಲಿ ಸಮರಸ ಇಂತಹದೊಂದು ಯತ್ನಕ್ಕೆ ಮೊತ್ತಮೊದಲು ಪಾದಾರ್ಪಣೆಗೈಯ್ಯುತ್ತಿದೆ. ಎಲ್ಲಾ ಸಹೃದಯರ ಸಹಕಾರ ಇದ್ದೇ ಇದೆಯೆನ್ನುವುದೂ ಸಮಾಧಾನ.
ಹಾಗಿದ್ದರೆ ತಡಕಾಟ ಬೇಡ. ಇಂದಿನಿಂದ ದಿನನಿತ್ಯ ಪೂರಕ ಪ್ರಶ್ನೋತ್ತರಿಗಳು ಲಭ್ಯವಾಗಲಿದೆ. ಇಂದು ಮೊದಲ ಪ್ರಾಯೋಗಿಕ ಭಾಗವಾಗಿ ಗಣಿತ ಪಠ್ಯ ಪ್ರಕಟಗೊಂಡಿದೆ. ಬಳಸುವುದು ಜೊತೆಗೆ ಇತರರಿಗೂ ಮುಟ್ಟಿಸುವ ಹೊಣೆ ಎಲ್ಲರದೆಂಬುದನ್ನು ಮತ್ತೆ ವಿನಂತಿಸುತ್ತಾ.....
ಸಮರಸ ಸಂಪಾದಕಿ