ಜಿಲ್ಲಾ ಮಟ್ಟದ ಸ್ವ ಉದ್ಯೋಗ ಮಾಹಿತಿ ಶಿಬಿರ ಇಂದು
0
ಡಿಸೆಂಬರ್ 06, 2018
ಮಂಜೇಶ್ವರ: ಕೇರಳ ಖಾದಿ ಗ್ರಾಮೋದ್ಯೋಗ ಮಂಡಳಿ ಹಾಗೂ ವಿನೋಬಾ ವೆಂಕಟೇಶ್ ರಾವ್ ಶಾಂತಿ ಸೇವಾ ಫೌಂಡೇಶನ್ ಜಂಟಿ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಪ್ರಧಾನಮಂತ್ರಿ ಉದ್ಯೋಗ ಕೌಶಲ್ಯ ಅಭಿವೃದ್ದಿ (ಪಿಎಂಇಜಿಪಿ)ಮಾಹಿತಿ ಶಿಬಿರ ಇಂದು ಅಪರಾಹ್ನ 2 ರಿಂದ ಹೊಸಂಗಡಿಯ ಗೇಟ್ ವೇ ಅಡಿಟೋರಿಯಂ ನಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಎಜಿಸಿ ಬಶೀರ್ ಅವರು ಅಧ್ಯಕ್ಷತೆ ವಹಿಸುವರು. ಕೇರಳ ಖಾದಿ ಗ್ರಾಮೋದ್ಯೋಗ ಮಂಡಳಿಯ ಉಪಾಧ್ಯಕ್ಷೆ ಶೋಭನಾ ಜಾರ್ಜ್ ಉದ್ಘಾಟಿಸುವರು. ವಿನೋಬಾ ವೆಂಕಟೇಶ್ ರಾವ್ ಶಾಂತಿ ಸೇವಾ ಫೌಂಡೇಶನ್ ಪ್ರಧಾನ ಸಂಚಾಲಕ ಹರ್ಷಾದ್ ವರ್ಕಾಡಿ, ಮಂಜೇಶ್ವರ ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ಅಝೀಜ್ ಹಾಜಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಬಂಧಕಿ ರೇಖಾ, ಲೀಡ್ ಬ್ಯಾಂಕ್ ಜಿಲ್ಲಾ ಪ್ರಬಂಧಕ ರಮಣನ್ ಸಿ.ಎನ್ ಮುಖ್ಯ ಅತಿಥಿಳಾಗಿ ಉಉಸ್ಥಿತರಿದ್ದು ಮಾತನಾಡುವರು. ಕೇರಳ ಖಾದಿ ಗ್ರಾಮೋದ್ಯೋಗ ಮಂಡಳಿಯ ನಿರ್ದೇಶಕ ಸಿ.ಕೆ.ಅನಿಲ್ ಕುಮಾರ್, ಪಿಎಂಇಜಿಪಿ ರಾಜ್ಯ ನೋಡಲ್ ಅಧಿಕಾರಿ ಆರ್.ಪ್ರದೀಪ್, ಕೇರಳ ಖಾದಿ ಗ್ರಾಮೋದ್ಯೋಗ ಮಂಡಳಿಯ ಮಾಹಿತಿ ಅಧಿಕಾರಿ ಪಿ.ಎನ್.ಅಜಯ್ ಕುಮಾರ್ ಅವರುಗಳು ವಿವಿಧ ವಿಷಯಗಳ ಬಗ್ಗೆ ತರಗತಿ ನಡೆಸುವರು. ಕೆ.ಪಿ. ಗಿರೀಶ್ ಕುಮಾರ್, ಸುಭಾಶ್ ಪಿ ಮೊದಲಾದವರು ಉಪಸ್ಥಿತರಿರುವರು. ಆಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಯೋಜನ ಪಡೆಯಬಹುದೆಂದು ಸಂಘಟಕರು ತಿಳಿಸಿದ್ದಾರೆ.