ಅಕ್ರಮ ಘಟನೆಗಳ ನಿಯಂತ್ರಣ: ಜಿಲ್ಲಾಧಿಕಾರಿಗಳ ವಾಟ್ಸ್ ಆಪ್ಗೆ ಮಾಹಿತಿ ನೀಡಿ
0
ಡಿಸೆಂಬರ್ 04, 2018
ಕಾಸರಗೋಡು: ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಸಹಿತ ಕಾನೂನುಬಾಹಿರ ಪ್ರಕರಣಗಳು ಕಂಡುಬಂದರೆ ಸಾರ್ವಜನಿಕರು ತಮ್ಮ ವಾಟ್ಸ್ಆಪ್ ನಂಬ್ರಕ್ಕೆ ಮಾಹಿತಿ ನೀಡಿದಲ್ಲಿ ತಕ್ಷಣ ಕ್ರಮಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
9447496600 ಎಂಬ ನಂಬ್ರ ಮೂಲಕ ಜಿಲ್ಲಾಧಿಕಾರಿ ಅವರ ಗಮನಕ್ಕೆ ವಿಚಾರ ತರಬಹುದು.ಲೊಕೇಶನ್ ಶೇರ್ ಆಪ್ಶನ್ ಆಕ್ಟಿವೇಟ್ ಮಾಡಿ ಮಾಹಿತಿ ಕಳುಹುವಂತೆ ಅವರು ವಿನಂತಿಸಿದ್ದಾರೆ. ಈ ಮೂಲಕ ಆಯಾ ಪ್ರದೇಶಗಳ ಗುರುತು ಸುಲಭವಾಗಲಿದ್ದು, ಆರೋಪಿಗಳ ಪತ್ತೆ ಸುಲಲಿತವಾಗಲಿದೆ ಎಂದವರು ಹೇಳಿದರು.