ಬಾಳ್ಯೂರು : ಏಕಾಹ ಭಜನಾ ಕಾರ್ಯಕ್ರಮ
0
ಡಿಸೆಂಬರ್ 03, 2018
ಮಂಜೇಶ್ವರ: ಕುಳೂರು ಸುಣ್ಣಾರ ಬಾಳ್ಯೂರು ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ 6 ನೇ ವರ್ಷದ ಏಕಾಹ ಭಜನಾ ಕಾರ್ಯಕ್ರಮ ಡಿ.8 ರಂದು ಮತ್ತು 29 ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಡಿ.9 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಡಿ.8 ರಂದು ಬೆಳಿಗ್ಗೆ 6.41 ರಿಂದ ಮರುದಿನ ಬೆಳಿಗ್ಗೆ 6.41 ರ ವರೆಗೆ ಏಕಾಹ ಭಜನೆ ನಡೆಯಲಿದೆ. ಬೆಳಗ್ಗೆ 6.41 ಕ್ಕೆ ಏಕಾಹ ಭಜನಾ ಕಾರ್ಯಕ್ರಮ ಆರಂಭ, ನಿವೃತ್ತ ಮುಖ್ಯೋಪಾಧ್ಯಾಯ ಬಾಲಕೃಷ್ಣ ಭಂಡಾರಿ ದಡ್ಡಂಗಡಿ ಅವರಿಂದ ದೀಪ ಪ್ರಜ್ವಲನೆ, ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ವಸಂತ ಭಟ್ ತೊಟ್ಟೆತ್ತೋಡಿ ಭಜನೆ ನಿರ್ವಹಣೆ ನಡೆಸುವರು.
ಡಿ.9 ರಂದು ಶ್ರೀ ಸತ್ಯನಾರಯಣ ಪೂಜೆ ಜರಗಲಿದೆ. ಬೆಳಿಗ್ಗೆ 8 ಕ್ಕೆ ಗಣಹೋಮ, 9 ಕ್ಕೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 11.30 ಕ್ಕೆ ಧಾರ್ಮಿಕ ಸಭೆ ನಡೆಯುವುದು. ಕಾರ್ಯಕ್ರಮದಲ್ಲಿ ಡಾ.ಶ್ರೀಧರ ಭಟ್ ಎಂ. ಅಧ್ಯಕ್ಷತೆ ವಹಿಸುವರು. ಒಡಿಯೂರು ಗುರುದೇವದತ್ತ ಸಂಸ್ಥಾನಮ್‍ನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಮುಖ್ಯ ಅತಿಥಿಗಳಾಗಿ ಡಾ.ಕೆ.ಎಸ್.ಮೋಹನ ನಾರಾಯಣ, ಎಂ.ವಿ.ಸುಕುಮಾರನ, ಡಾ.ಉದಯ ಕುಮಾರ್ ದೈಗೋಳಿ, ಅಶ್ವತ್ ಪೂಜಾರಿ ಲಾಲ್‍ಭಾಗ್, ಮೋಹನ ಕೆ, ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ, ಭರತ್ ಕುಮಾರ್, ವಿಶ್ವನಾಥ ಶೆಟ್ಟಿ ಮೊದಲಾದವರು ಭಾಗವಹಿಸುವರು.
ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್.ಶೆಟ್ಟಿ ಪೆÇಯ್ಯೆಲು ಅವರನ್ನು ಗೌರವಿಸಲಾಗುವುದು.