ಎನ್‍ಎಸ್‍ಎಸ್ ಸಪ್ತದಿನ ಶಿಬಿರ : ಸ್ವಾಗತ ಸಮಿತಿ ರಚನೆ ಸಭೆ
0
ಡಿಸೆಂಬರ್ 05, 2018
ಬದಿಯಡ್ಕ: ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಎನ್‍ಎಸ್‍ಎಸ್ ಸಪ್ತದಿನ ಶಿಬಿರ ಡಿ.22 ರಿಂದ 28 ರ ವರೆಗೆ ಮಾನ್ಯ ಜ್ಞಾನೋದಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದ್ದು, ಇದರ ಸ್ವಾಗತ ಸಮಿತಿ ರೂಪೀಕರಣ ಸಭೆ ಮಾನ್ಯ ಜ್ಞಾನೋದಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.
ಸಭೆಯಲ್ಲಿ ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸಂಜೀವ ರೈ ಉದ್ಘಾಟಿಸಿದರು. ಮಾನ್ಯ ಶಾಲಾ ಮುಖ್ಯೋಪಾಧ್ಯಾಯ ಗೋವಿಂದನ್ ನಂಬೂದಿರಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತಿ ಸದಸ್ಯ ಶ್ಯಾಮ್ ಪ್ರಸಾದ್ ಮಾನ್ಯ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಾಟುಕುಕ್ಕೆ ಶಾಲಾ ಪ್ರಬಂಧಕ ಮಿತ್ತೂರು ಪುರುಷೋತ್ತಮ ಭಟ್, ಪ್ರಾಂಶುಪಾಲ ಪದ್ಮನಾಭ ಶೆಟ್ಟಿ, ಆಡಳಿತ ಮಂಡಳಿ ಸದಸ್ಯ ಎಂ.ಎಸ್.ಗಾಂಭೀರ್, ನಿವೃತ್ತ ಮುಖ್ಯೋಪಾಧ್ಯಾಯ ಎಂ.ಎಸ್.ನವೀನ್‍ಚಂದ್ರ, ನಿವೃತ್ತ ಪ್ರಾಧ್ಯಾಪಕ ಪೆÇ್ರ.ಎ.ಶ್ರೀನಾಥ್, ಮಾನ್ಯ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸತೀಶ, ಸಮಾಜ ಸೇವಕ ಖಾದರ್ ಮಾನ್ಯ ಮುಂತಾದವರು ಮಾತನಾಡಿದರು. ನಿತ್ಯಾನಂದ ಆರ್, ರಾಜೇಶ್ ಶೆಟ್ಟಿ, ರಾಮ ಕರ್ಮಾರ್ ಎನ್.ವಿ, ಸುಂದರ್ ಶೆಟ್ಟಿ, ಮಧುಚಂದ್ರ, ಜನಾರ್ಧನ, ಅನಿತಾ, ಸುಜಾತಾ, ಶಾಂತ, ಸುಧಾ, ಬಿ.ಎಂ.ಝುಬೈನ್, ಎಲಿಜ ಡಿ'ಸೋಜಾ, ಉದಯ ಪಣಿಕ್ಕರ್, ಬೇಬಿ ಮೊದಲಾದವರು ಉಪಸ್ಥಿತರಿದ್ದರು.
ಅಧ್ಯಾಪಕ ಸುರೇಂದ್ರನ್ ಸ್ವಾಗತಿಸಿ, ಎನ್‍ಎಸ್‍ಎಸ್ ಯೋಜನಾಧಿಕಾರಿ ಮಹೇಶ್ ಏತಡ್ಕ ವಂದಿಸಿದರು. ರೇಜು ವಿ. ಕಾರ್ಯಕ್ರಮ ನಿರೂಪಿಸಿದರು. ವಿವಿಧ ಸಮಿತಿಗಳನ್ನು ರೂಪೀಕರಿಸಲಾಯಿತು. ಮುಂದಿನ ಸಭೆ ಡಿ.18 ರಂದು ನಡೆಯಲಿದೆ.