HEALTH TIPS

ಸಾಹಿತ್ಯದಿಂದ ಸಾತ್ವಿಕ ಸಮಾಜ ಸೃಷ್ಟಿ - ವಿರಾಜ್ ಅಡೂರು


          ಬದಿಯಡ್ಕ :'ಯಾವುದೇ ಭಾಷೆಯ ಬೆಳವಣಿಗೆಗೆ ಭಾಷೆಯ ಬಳಕೆ ಅಗತ್ಯ. ಸಂಹವನಗಳು ನಡೆದಷ್ಟೂ ಭಾಷೆ ಬಲಿಷ್ಠವಾಗುತ್ತದೆ. ಭಾಷೆಗಳು ಬಲಿಷ್ಠವಾಗಲು ಸಮ್ಮೇಳನಗಳು ನಡೆಯಬೇಕು. ಸಾಹಿತಿಯಾದವನು ತನ್ನ ಕೃತಿಗಳ ಸಂದೇಶದ ಮೂಲಕ ಚಿರಂಜೀವಿಯಾಗುತ್ತಾನೆ. ಕವನದಲ್ಲಿ ಆಕರ್ಷಣೆ ಹಾಗೂ ದೂರಾಲೋಚನೆ ಹಾಗೂ ಹೊಸ ಸಂವೇದನೆಗಳ ಹೊಳಪು ಇರಬೇಕು' ಎಂದು ಚುಟುಕು ಸಾಹಿತಿ ವಿರಾಜ್ ಅಡೂರು ಹೇಳಿದರು.
          ಅವರು ಭಾನುವಾರ ನೀರ್ಚಾಲು ಸಮೀಪದ ಪುದುಕೋಳಿಯ ಶೇಷ ಸಭಾಭವನದಲ್ಲಿ ಪುತ್ತೂರು ಸಾಹಿತ್ಯ ವೇದಿಕೆ, ಮಾನ್ಯದ ಯಕ್ಷಮಿತ್ರ ಸಾಂಸ್ಕøತಿಕ ಪ್ರತಿಷ್ಠಾನ, ಉಪ್ಪಿನಂಗಡಿಯ ಸತ್ಯಶಾಂತ ಪ್ರೊಡಕ್ಷನ್ಸ್ ಹಾಗೂ ಕೆದಿಲಾಯ ಪ್ರತಿಷ್ಠಾನದ ಜಿಲ್ಲಾ ಘಟಕದ ಜಂಟಿ ಆಶ್ರಯದಲ್ಲಿ ನಡೆದ ಕನ್ನಡ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಯುವ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
       'ಸಾಹಿತ್ಯದ ಅಧ್ಯಯನ ಹಾಗೂ ಬರವಣಿಗೆಯಿಂದ ಸಾತ್ವಿಕ ಸಮಾಜದ ಸೃಷ್ಟಿಯಾಗುತ್ತದೆ. ಪೋಷಕರು ತಮ್ಮ ಮಕ್ಕಳಿಗೆ ಸಾಹಿತ್ಯದ ಅಭಿರುಚಿ ಬೆಳೆಸುವಂತೆ ಪ್ರೇರೇಪಿಸಬೇಕು. ನೂತನ ತಂತ್ರಜ್ಞಾನಗಳನ್ನು ಮಕ್ಕಳು ಪ್ರಗತಿಗೆ ಆಧಾರವಾಗಿ ಬಳಸಿಕೊಳ್ಳಬೇಕು. ಅದರ ದುರುಪಯೋಗ ಮಾಡಬಾರದು. ಸಾಹಿತ್ಯವು ಸಾಹಿತಿಯ ಆಂತರಂಗಿಕ ಮಥನ. ಇದರಿಂದ ಸೃಷ್ಟಿಯಾಗುವ ಸುವಸ್ತುಗಳಿಂದ ಆರೋಗ್ಯಕರ ಸಮಾಜದ ನಿರ್ಮಾಣವಾಗುತ್ತದೆ ಎಂದು ಅವರು ಹೇಳಿದರು.   
        ಕವಿಗೋಷ್ಠಿಯಲ್ಲಿ ಅಕ್ಷತಾರಾಜ್ ಪೆರ್ಲ, ರಂಗಶರ್ಮ ಉಪ್ಪಂಗಳ, ವಿಜಯರಾಜ ಪುಣಿಂಚಿತ್ತಾಯ, ಸುಭಾಷ್ ಪೆರ್ಲ, ಸುಕುಮಾರ ಬೆಟ್ಟಂಪಾಡಿ, ಆನಂದ ರೈ ಅಡ್ಕಸ್ಥಳ, ಕೆ ಎಸ್ ದೇವರಾಜ್, ಶ್ರೀಶಕುಮಾರ ಪಂಜಿತ್ತಡ್ಕ, ವೀರೇಶ್ವರ ಭಟ್, ಡಾ. ರತ್ನಾಕರ ಮಲ್ಲಮೂಲೆ, ಚಿನ್ಮಯಕೃಷ್ಣ ಕಡಂದೇಲು, ಭೀಮಾರಾವ್ ವಾಷ್ಟರ್ ಸುಳ್ಯ ಮೊದಲಾದವರು ಭಾಗವಹಿಸಿದ್ದರು. ಪತ್ರಕರ್ತ ಪುರುಷೋತ್ತಮ ಭಟ್ ನಿರ್ವಹಿಸಿದರು. ಹರೀಶ್ ಸುಲಾಯ ಒಡ್ಡಂಬೆಟ್ಟು ನಿರೂಪಿಸಿದರು. ದೇವರಾಜ್ ಕುಂಬಳೆ ಸ್ವಾಗತಿಸಿದರು. ಗಣೇಶ್ ಪೈ ಬದಿಯಡ್ಕ ವಂದಿಸಿದರು. ಪುತ್ತೂರು ಸಾಹಿತ್ಯ ವೇದಿಕೆಯ ಅಧ್ಯಕ್ಷ ಕಟ್ಟತ್ತಿಲ ಗೋಪಾಲಕೃಷ್ಣ ಭಟ್ ಅವರು ಕವಿಗಳನ್ನು ಸ್ಮರಣಿಕೆ ಹಾಗೂ ಪ್ರಮಾಣ ಪತ್ರ ನೀಡಿ ಅಭಿನಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries