ಎಡರಂಗ ಜಿಲ್ಲೆಯನ್ನು ಅವಗಣಿಸಿದೆ-ಕೆ.ಎಸ್.ಹಂಸ
0
ಡಿಸೆಂಬರ್ 04, 2018
ಕಾಸರಗೋಡು: ಪ್ರಸ್ತುತ ರಾಜ್ಯವನ್ನು ಆಳುತ್ತಿರುವ ಎಡರಂಗ ಸರಕಾರವು ಕಾಸರಗೋಡು ಜಿಲ್ಲೆಯನ್ನು ಸಂಪೂರ್ಣ ಅವಗಣಿಸುತ್ತಿದೆ. ಹಿಂದಿನ ಐಕ್ಯರಂಗದ ಸರಕಾರ ಅಧಿಕಾರದಲ್ಲಿದ್ದಾಗ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ದೃಷ್ಠಿಯಿಂದ ರೂಪಿಸಲಾಗಿದ್ದ ಪ್ರಭಾಕರನ್ ಆಯೋಗದ ಶಿಫಾರಸಿನಂತೆ ಜಿಲ್ಲೆಯ ಅಭಿವೃದ್ಧಿ ಲಕ್ಷ್ಯವನ್ನಿಟ್ಟುಕೊಂಡು ಪ್ರತ್ಯೇಕ ಹಣವನ್ನು ಮೀಸಲಿಡಲು ಸರಕಾರಕ್ಕೆ ಸಾಧ್ಯವಾಗಿಲ್ಲ ಎಂದು ಮುಸ್ಲಿಂ ಲೀಗ್ ರಾಜ್ಯ ಕಾರ್ಯದರ್ಶಿ ಕೆ.ಎಸ್ ಹಂಸ ಹೇಳಿದರು.
ನಗರದಲ್ಲಿ ನಡೆದ ಮುಸ್ಲಿಂ ಲೀಗ್ ಜಿಲ್ಲಾ ಸಮಿತಿಯ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ರಾಜ್ಯ ಸರಕಾರಕ್ಕೆ ಜಿಲ್ಲೆಯ ಅಭಿವೃದ್ಧಿಯ ಲಕ್ಷ್ಯವಿಲ್ಲ, ಹಲವು ಅಭಿವೃದ್ಧಿ ಯೋಜನೆಗಳಿಗೆ ಸೂಕ್ತ ಹಣವನ್ನು ಮೀಸಲಿಡದ ಸರಕಾರದ ಕ್ರಮ ಸಾಧುವಲ್ಲ ಎಂದರು. 2018 ರ ಬಜೆಟ್ ಮೂಲಕ ಜಿಲ್ಲೆಗೆ 90 ಕೋಟಿ ರೂ.ಗಳನ್ನು ಘೋಷಿಸಲಾಗಿದೆ. ಆದರೆ ಘೋಷಿಸಲ್ಪಟ್ಟ ಹಣ ಮಂಜೂರಾಗದೆ ಯೋಜನೆಗಳು ಸ್ತಬ್ದವಾಗಿವೆ ಎಂದರು. ಆರ್ಥಿಕ ವರ್ಷಕ್ಕೆ ಕೆಲವೇ ತಿಂಗಳುಗಳು ಬಾಕಿಯಿರುವಾಗ ಹಣ ಮಂಜುರಾತಿಯ ಮೂಲಕ ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಸಾಕಾರಕ್ಕೆ ಶ್ರಮಿಸಬೇಕಿದೆ ಎಂದರು. ಜಿಲ್ಲೆಯ ಅವಗಣನೆಯನ್ನು ನಿಲ್ಲಿಸಿ, ಕಾಸರಗೋಡು ಪ್ಯಾಕೇಜ್ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷ ಎಂ.ಸಿ.ಖಮರುದ್ದೀನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಎ.ಅಬ್ದುಲ್ ರೆಹ್ಮಾನ್ ಸ್ವಾಗತಿಸಿದರು. ಮಾಜಿ ಸಚಿವ ಸಿ.ಟಿ ಅಹಮ್ಮದಾಲಿ, ಕಲ್ಲಟ್ರ ಮಾಹಿನ್ ಹಾಜಿ, ಟಿ.ಇ.ಅಬ್ದುಲ್ಲಾ, ಶಾಸಕ ಎನ್.ಎ.ನೆಲ್ಲಿಕುನ್ನು, ಎಂ.ಎಸ್.ಮುಹಮ್ಮದ್ ಕುಞ, ವಿ.ಕೆ.ಪಿ.ಹಮೀದಾಲಿ, ಆಸೀಸ್ ಮರಿಕೈ, ಕೆ.ಮಹಮ್ಮದ್ ಕುಞ, ವಿ.ಪಿ ಅಬ್ದುಲ್ ಖಾದರ್, ಪಿ.ಎಂ.ಮುನೀರ್ ಹಾಜಿ, ಮೂಸಾ.ಬಿ.ಚೆರ್ಕಳ, ಜಿ.ಪಂ ಅಧ್ಯಕ್ಷ ಎ.ಜಿ.ಸಿ ಬಶೀರ್, ಕೆ.ಇ.ಎ.ಅಬುಬಕರ್, ಎಂ.ಅಬ್ಬಾಸ್, ಕೆ.ಅಬ್ದುಲ್ಲಾ ಕುಞ ಚೆರ್ಕಳ, ಎ.ಬಿ.ಶಾಫಿ, ಅಡ್ವ.ಎಂ.ಟಿ.ಪಿ ಕರೀಂ ಮೊದಲಾದವರು ಇದ್ದರು.