ಐ.ರಾಮ ರೈ ಸಂಸ್ಮರಣೆ
0
ಡಿಸೆಂಬರ್ 05, 2018
ಕಾಸರಗೋಡು: ಮಾಜಿ ಸಂಸದ ಡಿ.ಸಿ.ಸಿ. ಅಧ್ಯಕ್ಷರಾಗಿದ್ದ ಐ.ರಾಮ ರೈ ಅವರ 9 ನೇ ಪುಣ್ಯತಿಥಿ ಕಾರ್ಯಕ್ರಮ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಕೀಂ ಕುನ್ನಿಲ್ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಹಕೀಂ ಕುನ್ನಿಲ್ 1984 ರ ಕಾಲಘಟ್ಟದಲ್ಲಿ ಕಾಸರಗೋಡು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಐ.ರಾಮ ರೈ ಪಕ್ಷದ ಅಭಿವೃದ್ಧಿಯಲ್ಲಿ ತಮ್ಮ ಅಮೂಲ್ಯ ಕೊಡುಗೆಯನ್ನು ನೀಡಿದ್ದರು ಎಂದು ಸ್ಮರಿಸಿದರು. ಕಣ್ಣೂರು ಜಿಲ್ಲೆಯ ಭಾಗವಾಗಿದ್ದ ಕಾಸರಗೋಡಿನ ಕುಂಬಳೆ ಇಚ್ಲಂಗೋಡಿನವರಾದ ರಾಮ ರೈ 18 ವರ್ಷಗಳ ಕಾಲ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕೇರಳ ರಾಜ್ಯ ಕರ್ಷಕ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಕೃಷಿ ರಂಗದ ಅಭ್ಯುದಯಕ್ಕೂ ಕಾರಣರಾಗಿದ್ದರು ಎಂದು ಹೇಳಿದರು.
ಕೆ.ಪಿ.ಸಿ.ಸಿ. ಕಾರ್ಯದರ್ಶಿ ಕೆ.ನೀಲಕಂಠನ್, ಡಿ.ಸಿಸಿ. ಪ್ರಧಾನ ಕಾರ್ಯದರ್ಶಿ ಎಂ.ಕುಞಂಬು ನಂಬ್ಯಾರ್, ನ್ಯಾಯವಾದಿ ಎ.ಗೋವಿಂದನ್ ನಾಯರ್, ಕರುಣ್ ತಾಪ್ಪ, ಕೆ.ಖಾಲಿದ್, ದುಬೈ ಇಮಕಾಸ್ ಜಿಲ್ಲಾಧ್ಯಕ್ಷ ಮುನೀರ್ ಕುಂಬಳೆ, ಉಮೇಶ್ ಅಣಂಗೂರು, ಸಿ.ಜಿ.ಟೋಮಿ, ಸಿಲೋನ್ ಅಶ್ರಫ್ ಮೊದಲಾದವರು ಉಪಸ್ಥಿತರಿದ್ದರು.