ಕೇಂದ್ರ ಸರಕಾರದ ಯೋಜನೆಯನ್ನು ಮನೆ ಮನೆ ಮನಮುಟ್ಟಿಸಲು ಕರೆ ಬಿ.ಜೆ.ಪಿ ಮಂಗಲ್ಪಾಡಿ ಹೇರೂರು ಸಮಾವೇಶ
0
ಡಿಸೆಂಬರ್ 03, 2018
ಉಪ್ಪಳ: ಮಂಗಲ್ಪಾಡಿ ಪಂಚಾಯತಿಯ ಭಾರತೀಯ ಜನತಾಪಕ್ಷದ 96 ನೇ ಬೂತ್ ಸಮಾವೇಶವು ಇತ್ತೀಚೆಗೆ ಅಮ್ಮು ಶೆಟ್ಟಿ ಪಾಂಡಿಬೈಲು ಮನೆಪರಿಸರದಲ್ಲಿ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೂತ್ ಅಧ್ಯಕ್ಷ ಜಯಪ್ರಕಾಶ್ ವಹಿಸಿದ್ದರು. ಬಿ.ಜೆ.ಪಿ ಮಂಗಲ್ಪಾಡಿ ಪಂಚಾಯತಿ ಪ್ರಭಾರಿ, ಜಿಲ್ಲಾ ಸಮಿತಿ ಸದಸ್ಯ ರಮೇಶ್ ಭಟ್ ಮಾತಾಡಿ, ಮುಂದಿನ ಚುನಾವಣೆಗೆ ಕಾರ್ಯಕರ್ತರು ಎಲ್ಲಾರೀತಿಯಲ್ಲಿ ಸಜ್ಜಾಗಿರಬೇಕು ಮತ್ತು ಕೇಂದ್ರ ಸರಕಾರದ ಜನಪರ ಯೋಜನೆಯನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಮಾಡಬೇಕೆಂದರು. ಶಬರಿಮಲೆ ವಿಚಾರದಲ್ಲಿ ಕೇರಳ ರಾಜ್ಯ ಸರಕಾರ ತೋರುತ್ತಿರುವ ಹಿಂದೂ ವಿರೋಧಿ ನೀತಿಯನ್ನು ಖಂಡಿಸಿದರು.
ಬಿ.ಜೆ.ಪಿ ಮಂಜೇಶ್ವರ ಮಂಡಲ ಕಾರ್ಯದರ್ಶಿ, ಪೈವಳಿಕೆ ಗ್ರಾ.ಪಂ.ಮಾಜಿ ಅಧ್ಯಕ್ಷ ಮಣಿಕಂಠ ರೈ ಪಟ್ಲ ಮಾತನಾಡಿ ಕೇಂದ್ರ ಸರಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದರೂ ರಾಜ್ಯ ಸರಕಾರ ಕೇರಳ ಜನತೆಗೆ ಈ ಯೋಜನೆಗಳು ಲಭ್ಯವಾಗದಂತೆ ತೆರೆಮರೆ ಯತ್ನವನ್ನು ಮಾಡುತ್ತಿದೆಯೆಂದು ಆರೋಪಿಸಿದರು. ಬಿ.ಜೆ.ಪಿ ಕಾರ್ಯಕರ್ತರು ಮನೆ ಮನೆ ತೆರೆಳಿ ಜನರಿಗೆ ಮನಮುಟ್ಟುವ ರೀತಿಯಲ್ಲಿ ಯೋಜನೆಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು. ಬಳಿಕ ಕೇಂದ್ರ ಸರಕಾರದ ಹಲವಾರು ಯೋಜನೆಗೆಳ ಬಗ್ಗೆ ಮತ್ತು ಇದನ್ನು ಪಡೆದುಕೊಳ್ಳುವ ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಸಭೆಯಲ್ಲಿ ಬಿ.ಜೆ.ಪಿ ಹಿರಿಯ ನೇತಾರರಾದ ಸಿ.ಟಿ ಹೆಬ್ಬಾರ್ , ಮಂಗಲ್ಪಾಡಿ ಪಂಚಾಯತಿ ಅಧ್ಯಕ್ಷ ರಾಘವ ಕೊಪ್ಪಳ, ಬಿ.ಜೆ.ಪಿ ಪಂಚಾಯತಿ ಸಮಿತಿ ಪ್ರಧಾನ ಕಾರ್ಯದರ್ಶಿ ದಿನೇಶ್ ಚೆರುಗೋಳಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸುರೇಶ್ ಶೆಟ್ಟಿ ಹೇರೂರು, ಸಂದೀಪ್ ಹೇರೂರು, ಉದಯ ಗಾಂಭೀರ್, ಉಮೇಶ್ ಮೊದಲಾದವರು ಉಪಸ್ಥಿತರಿದ್ದರು. ರಾಮಕೃಷ್ಣ ಸ್ವಾಗತಿಸಿ, ನೇತ್ರರಾಜ್ ವಂದಿಸಿದರು.