ಎಸ್.ಎ.ಟಿ. ಶಾಲಾ ತಂಡದ ಕಿರು ನಾಟಕ ಸ್ಪರ್ಧೆಯಲ್ಲಿ ಪ್ರಥಮ
0
ಡಿಸೆಂಬರ್ 05, 2018
ಮಂಜೇಶ್ವರ: ಮಂಜೇಶ್ವರ ಪಂಚಾಯತಿ ಮಟ್ಟದಲ್ಲಿ ಕುಷ್ಠ ರೋಗ ನಿರ್ಣಯ ಪ್ರಚಾರ ಪ್ರಯುಕ್ತ ವಿವಿಧ ಶಾಲೆಗಳ ಕಿರು ನಾಟಕ ಸ್ಪರ್ಧೆ ಎಸ್.ಎ.ಟಿ. ಅನಂತ ವಿದ್ಯಾ ಸಭಾಂಗಣದಲ್ಲಿ ನಡೆಯಿತು.
ಎಸ್.ಎ.ಟಿ. ಶಾಲಾ ವಿದ್ಯಾರ್ಥಿನಿಯರು ಪ್ರಥಮ ಸ್ಥಾನವನ್ನು ಪಡೆದು ನಗದು ಪುರಸ್ಕಾರಕ್ಕೆ ಅರ್ಹರಾದರು. ತರಬೇತುಗೊಳಿಸಿದ ಮಹೇಶ್ ಕೆ.ವಿ, ಜಯಪ್ರಕಾಶ್ ಶೆಟ್ಟಿ ಬೇಳ, ನಾಗೇಶ್, ಶ್ಯಾಮ ಕೃಷ್ಣ ಪ್ರಕಾಶ್ ಅವರಿಗೆ ಶಾಲಾ ಮುಖ್ಯೋಪಾಧ್ಯಾಯರು ಅಭಿನಂದನೆ ಸಲ್ಲಿಸಿದ್ದಾರೆ.