ಆಯುಷ್ ಕ್ಲಬ್‍ನ ಉದ್ಘಾಟನೆ
0
ಡಿಸೆಂಬರ್ 06, 2018
ಉಪ್ಪಳ: ಕೇಂದ್ರದ ಆಯುಷ್ ಸಚಿವಾಲಯದ ನಿರ್ದೇಶನದಂತೆ ಕುರುಡಪದವು ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಪ್ರೌಢ ಶಾಲೆಯಲ್ಲಿ ಆಯುಷ್ ಕ್ಲಬ್‍ನ ಉದ್ಘಾಟನೆ ನಡೆಯಿತು.
ಕಾರ್ಯಕ್ರಮವನ್ನು ಪೈವಳಿಕೆ ಸರಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯ ಡಾ.ಗಣೇಶ್ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿ ಮಕ್ಕಳಿಗೆ ಆಯುಷ್ ಕ್ಲಬ್‍ನ ಧ್ಯೇಯೋದ್ದೇಶಗಳನ್ನು ಹಾಗು ಕ್ಲಬ್‍ನ ಚಟುವಟಿಕೆಗಳನ್ನು ಹೇಗೆ ನಡೆಸಬಹುದು ಎಂದು ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಸ್ಥಳೀಯರು, ಶಾಲಾ ರಕ್ಷಕ ಶಿಕ್ಷಕ ಸಂಘದ ಸದಸ್ಯರು ಅಧ್ಯಾಪಕರ ಭಾಗವಹಿಸಿದರು.