ವಿಶ್ವ ಅಂಗವೈಕಲ್ಯ ದಿನಾಚರಣೆ
0
ಡಿಸೆಂಬರ್ 05, 2018
ಕಾಸರಗೋಡು: ವಿಶ್ವ ಅಂಗವೈಕಲ್ಯ ದಿನಾಚರಣೆ ಅಂಗವಾಗಿ ಸರಕಾರಿ ಸ್ಪೆಶಲ್ ಟೀಚರ್ಸ್ ಟ್ರೈನಿಂಗ್ ಸೆಂಟರ್‍ನ ಆಶ್ರಯದಲ್ಲಿ ಅಂಗವೈಕಲ್ಯ ವಿದ್ಯಾರ್ಥಿಗಳಿಗೆ ಸ್ಪೆಡ್ ಎಕ್ಸ್‍ಪೆÇೀ -2018 ಪ್ರದರ್ಶನವನ್ನು ಏರ್ಪಡಿಸಲಾಯಿತು.
ಡಯಟ್ ಪ್ರಾಂಶುಪಾಲ ವಿ.ಜಯದೇವನ್ ಉದ್ಘಾಟಿಸಿದರು. ಅಂಧರ ಶಾಲೆಯ ಮುಖ್ಯೋಪಾಧ್ಯಾಯ ಕೆ.ಅಬ್ದುಲ್ಲ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಮಾಸ್ಟರ್ ಪ್ರಣವ್, ಪಿ.ವಿ.ಲತಿಕಾ, ಪನ್ನಪುಝ ಬಶೀರ್ ಭಾಗವಹಿಸಿದರು. ಕಾಸರಗೋಡು ಅಂಧರ ವಿದ್ಯಾಲಯದ ಅಧ್ಯಾಪಕ ಆ್ಯಂಟಣಿ ಪಿ.ವಿ, ದೈಹಿಕ ಶಿಕ್ಷಕ ಬಾಬು ಇ.ವಿ, ಸರಕಾರಿ ಎಸ್‍ಟಿಟಿಸಿ ಪ್ರಾಧ್ಯಾಪಕಿ ಡಾ.ನೀತಾ ಜೋಸೆಫ್ ಶುಭ ಹಾರೈಸಿದರು.
ಸಿ.ರತ್ನಾಕರನ್ ಸ್ವಾಗತಿಸಿ, ಸಿ.ಎಂ. ಉಣ್ಣಿಕೃಷ್ಣನ್ ವಂದಿಸಿದರು.