ಇನ್ನು ಇದೂ ಶುರುವಾಯ್ತು ನೋಡಿ- ನಕಲಿ ಸಂದೇಶದ ವಿರುದ್ಧ ಹೋರಾಟ: ವಾಟ್ಸ್ ಅಪ್ ನಿಂದ ಭಾರತದಲ್ಲಿ ಟಿವಿ ಜಾಹೀರಾತು ಪ್ರಸಾರ ಆರಂಭ
0
ಡಿಸೆಂಬರ್ 04, 2018
ನವದೆಹಲಿ: ತನ್ನ ವೇದಿಕೆಯ ದುರುಪಯೋಗದಿಂದ ಸರ್ಕಾರದ ಕೆಂಗಣ್ಣಿಗೆ ಈಡಾಗಿರುವ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ ಅಪ್ ಸುಳ್ಳು ವದಂತಿಗಳ ಹರಡುವಿಕೆಯ ಸವಾಲು ಎದುರಿಸುವ ಸಲುವಾಗಿ ಭಾರತದಲ್ಲಿ ತನ್ನ ಟಿವಿ ಜಾಹೀರಾತು ಅಭಿಯಾನ ಪ್ರಾರಂಭಿಸಲಿದೆ.
ಸೋಮವಾರ (ಡಿಸೆಂಬರ್ 3) ವಾಟ್ಸ್ ಅಪ್ ಭಾರತದಲ್ಲಿ ಟ್ವಿ ಜಾಹೀರಾತನ್ನು ನೀಡಲು ಪ್ರಾರಂಭಿಸಿದೆ. ಇದಕ್ಕೆ ಮೊದಲು ತನ್ನ ಬಳಕೆದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮೆಸೇಜಿಂಗ್ ಸಂಸ್ಥೆ ಎರಡು ಹಂತಗಳಲ್ಲಿ ರೇಡಿಯೋ ಪ್ರಚಾರ ಕಾರ್ಯಕ್ರಮವನ್ನು ನಡೆಸಿತ್ತು.ಆಗಸ್ಟ್ 29 ರಂದು ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಛತ್ತೀಸ್ಗಢ, ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳಲ್ಲಿನ ಆಲ್ ಇಂಡಿಯಾ ರೇಡಿಯೋ (ಎಐಆರ್) ನ 46 ರೇಡಿಯೊ ಕೇಂದ್ರಗಳಲ್ಲಿ ಜಾಹೀರಾತು ಪ್ರಸಾರವಾಗಿತ್ತು. ಎರಡನೇ ಹಂತವಾಗಿ ಸೆ. 5ರಂದು ಅಸ್ಸಾಂ, ತ್ರಿಪುರಾ, ಪಶ್ಚಿಮ ಬಂಗಾಳ, ಗುಜರಾತ್, ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ತೆಲಂಗಾಣ, ಒರಿಸ್ಸಾ ಮತ್ತು ತಮಿಳುನಾಡಿನಲ್ಲಿ 83 ಎಐಆರ್ ರೇಡಿಯೋ ಕೇಂದ್ರಗಳಲ್ಲಿ ರೇಡಿಯೊ ಜಾಹೀರಾತು ಪ್ರಸಾರವಾಗಿದ್ದವು.
ಇದೀಗ ಟಿವಿ ಪ್ರಚಾರಕ್ಕಾಗಿ ಚಿತ್ರ ನಿರ್ಮಾಪಕಿ ಶೀರ್ಷಾ ಗುಹಾ ಥಾಕುರ್ತಾಬಳಕೆದಾರರ ನಡುವೆ ಹರಡುವ ವದಂತಿಗಳ ನಿಜ ಚಿತ್ರವ್ಚನ್ನು ನೀಡುವ ತಲಾ 60 ಸೆಕೆಂಡ್ ಗಳ ಮೂರು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.
ರಾಜಸ್ಥಾನ, ತೆಲಂಗಾಣ ವಿಧಾನಸಭೆ ಚುನಾವಣೆಗೆ ಮುನ್ನ ಈ ಅಭಿಯಾನ ಪ್ರಾರಂಭಿಸಲಾಗಿದೆ. ಈ ಜಾಹೀರಾತುಗಳು ಒಂಬತ್ತು ಭಾಷೆಗಳಲ್ಲಿ ಟಿವಿ, ಯೂ ಟ್ಯೂಬ್ ಹಾಗೂ ಫೇಸ್ ಬುಕ್ ಗಳಲ್ಲಿ ಪ್ರಸಾರವಾಗಲಿದೆ.ಮುಂಬರುವ ಲೋಕಸಭೆ ಚುನಾವಣೆಗೆ ಸಿದ್ದಗೊಳ್ಳಲಿಕ್ಕಾಗಿ ಈ ಅಭಿಯಾನವನ್ನು ಇನ್ನಷ್ಟು ಹೆಚ್ಚಿಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಭಾರತದಲ್ಲಿ 200 ಮಿಲಿಯನ್ ಗಿಂತ ಹೆಚ್ಚು ಬಳಕೆದಾರರನ್ನು ವಾಟ್ಸ್ ಅಪ್ ಹೊಂದಿದೆ. ಆದರೆ ಇತ್ತೀಚೆಗೆ ಅನಾಮಧೇಯ ವ್ಯಕ್ತಿಗಳು ಕಳಿಸುವ ಸುಲ್ಳು ವದಮ್ತಿ, ಸಂದೇಶಗಳು ವ್ಯಾಪಕವಾಗಿ ಹರಡುವ ಪರಿಣಾಮ ದೇಶದ ನಾನಾ ಕಡೆಗಳಲ್ಲಿ ಗುಂಪುಗಳಿಂದ ಥಳಿಸಿ ಹತ್ಯೆಗಳು ಸಂಭವಿಸಿದೆ.ಇದನ್ನು ತಡೆಯುವಂತೆ ಕೇಂದ್ರ ಸರ್ಕಾರ ವಾಟ್ಸ್ ಅಪ್ ಗೆ ಕಠಿಣ ಸಂದೇಶವನ್ನು ರವಾನಿಸಿತ್ತು.