ನವಜೀವನದಲ್ಲಿ ವಿದ್ಯಾರಂಗ ಜಿಲ್ಲಾ ಪ್ರತಿಭೋತ್ಸವ
0
ಡಿಸೆಂಬರ್ 05, 2018
ಬದಿಯಡ್ಕ: ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಕಾಸರಗೋಡು ಜಿಲ್ಲಾ ಪ್ರತಿಭೋತ್ಸವವು ಪೆರಡಾಲ ನವಜೀವನ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು. ಉಪಜಿಲ್ಲೆಗಳಿಂದ ಆಯ್ಕೆಯಾಗಿ ಬಂದ ವಿವಿಧ ಶಾಲೆಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ಸಾಹಿತ್ಯರಚನೆ, ಹಾಡು, ಅಭಿನಯ ಮೊದಲಾದ ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಯಿತು. ಜೊತೆಗೆ ವಿದ್ಯಾರ್ಥಿಗಳ ಅರಿವಿಗೇ ಬಾರದಂತೆ ಅವರ ಚಟುವಟಿಕೆಗಳನ್ನು ಗಮನಿಸುತ್ತಾ ಅವರಲ್ಲಿ ಪ್ರತಿಭಾನ್ವಿತರನ್ನು ಆರಿಸಲಾಯಿತು.
ಜಾನಪದ ಗೀತೆ ವಿಭಾಗದಲ್ಲಿ ಶಂಕರ ಸ್ವಾಮಿಕೃಪಾ, ಪುಸ್ತಕ ಆಸ್ವಾದನೆಯನ್ನು ಹ.ಸು. ಒಡ್ಡಂಬೆಟ್ಟು, ಕಥಾ ರಚನೆಯಲ್ಲಿ ಚೇತನಾ ಕುಂಬ್ಳೆ ಮತ್ತು ಸುಂದರ ಬಾರಡ್ಕ, ಕವಿತಾರಚನೆಯಲ್ಲಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಕಾವ್ಯಾಲಾಪನೆ(ಕಂಠಪಾಠ) ವಿ.ಬಿ.ಕುಳಮರ್ವ ಹಾಗೂ ಅಭಿನಯ ವಿಭಾಗದಲ್ಲಿ ಉದಯ ಸಾರಂಗ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ದಿನಪೂರ್ತಿ ನಡೆದ ತರಬೇತಿಯ ಬಳಿಕ ಪ್ರತಿಭಾನ್ವಿತರನ್ನು ಸಂಪನ್ಮೂಲ ವ್ಯಕ್ತಿಗಳು ಆರಿಸಿದರು. ಕನ್ನಡ ವಿಭಾಗದ ಸ್ಪರ್ಧೆಗಳು ಜಿಲ್ಲಾಮಟ್ಟಕ್ಕೆ ಮುಕ್ತಾಯಗೊಂಡಿತು. ಮಲಯಾಳ ವಿಭಾಗದ ವಿದ್ಯಾರ್ಥಿಗಳಿಗೆ ಒಂದು ದಿನದ ವಸತಿ ಶಿಬಿರ ನಡೆಸಲಾಯಿತು. ಸಂಜೆ ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ರಂಗಸಿರಿ ಸಾಂಸ್ಕøತಿಕ ವೇದಿಕೆಯ ವಿದ್ಯಾರ್ಥಿಗಳಿಂದ 'ಸುದರ್ಶನ ವಿಜಯ' ಯಕ್ಷಗಾನ ಪ್ರದರ್ಶನ ನಡೆಯಿತು.
ಫಲಿತಾಂಶ:
ಹೈಸ್ಕೂಲು ವಿಭಾಗ: ಕವಿತಾ ರಚನೆ: ಪ್ರಿಯಾ ಎಸ್(ಪ್ರಥಮ-ಎಸ್ ಎಸ್ ಎಚ್ ಎಸ್ ಕಾಟುಕುಕ್ಕೆ), ಶ್ರಾವ್ಯ ಎಚ್(ದ್ವಿತೀಯ-ಜಿ.ಎಚ್.ಎಸ್.ಉದ್ಯಾವರ), ವರಲಕ್ಷ್ಮಿ (ತೃತೀಯ-ಮಹಾಜನ ಸಂ.ಕಾ.ಹೈಸ್ಕೂಲು ನೀರ್ಚಾಲು); ಅಭಿನಯ: ಸಂಜಿತ ಆರ್(ಪ್ರಥಮ-ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ ಕೂಡ್ಲು), ಎನ್ ಶರತ್ ರಾವ್ ಜಾದವ್(ದ್ವಿತೀಯ-ಜಿ ವಿ ಎಚ್ ಎಸ್ ಎಸ್ ಕಾರಡ್ಕ), ಆರತಿ (ತೃತೀಯ-ಜಿಎಚ್‍ಎಸ್‍ಎಸ್ ಪಾಂಡಿ); ಕಥಾ ರಚನೆ: ದೀಪ್ತಿ (ಪ್ರಥಮ-ಬಿಇಎಂ ಹೈಸ್ಕೂಲು ಕಾಸರಗೋಡು), ಹೇಮಂತ ಕೃಷ್ಣ ಎಸ್(ದ್ವಿತೀಯ-ಎಸ್ ಎಸ್ ಎಚ್ ಎಸ್ ಕಾಟುಕುಕ್ಕೆ),ಚೈತ್ರ (ತೃತೀಯ-ಎಸ್‍ಎಟಿ ಮಂಜೇಶ್ವರ); ಪುಸ್ತಕಾಸ್ವಾದನೆ: ಮೇಘ ಶ್ರೀ ವಿ. ಎಸ್ (ಪ್ರಥಮ-ಮಹಾಜನ ಸಂ.ಕಾ.ಹೈಸ್ಕೂಲು ನೀರ್ಚಾಲು), ಯಶಸ್ವಿ ಜಿ(ದ್ವಿತೀಯ- ಜಿಎಚ್‍ಎಸ್‍ಎಸ್ ಕುಂಬಳೆ), ಧನ್ಯಶ್ರೀ ಎಂ (ತೃತೀಯ-ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ ಕೂಡ್ಲು); ಕಾವ್ಯಾಲಾಪನೆ: ವಿಕ್ರಂ ಭಾರದ್ವಾಜ್ ಪಿ (ಪ್ರಥಮ-ಎಸ್ ವಿ ವಿ ಎಚ್ ಎಸ್ ಎಸ್ ಮೀಯಪದವು), ದಿಶಾ ಪಿ.ಎಸ್(ದ್ವಿತೀಯ-ಜಿ ವಿ ಎಚ್ ಎಸ್ ಮುಳ್ಳೇರಿಯ), ಪ್ರಗತಿ (ತೃತೀಯ-ಮಹಾಜನ ಸಂ.ಕಾ.ಹೈಸ್ಕೂಲು ನೀರ್ಚಾಲು); ಜನಪದ ಗೀತೆ: ಮಂಜೂಷ ಸಿ ಎಂ (ಪ್ರಥಮ-ಎಸ್ ಎಸ್ ಎಚ್ ಎಸ್ ಕಾಟುಕುಕ್ಕೆ), ಶ್ರುತಿ,(ದ್ವಿತೀಯ), ಚಂದನ ಶ್ರೀ(ತೃತೀಯ-ಬಿಇಎಂ ಹೈಸ್ಕೂಲು ಕಾಸರಗೋಡು) ಹಾಗೂ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಕವಿತಾ ರಚನೆ: ವರ್ಶಿಣಿ(ಪ್ರಥಮ-ಎಯುಪಿಎಸ್ ಐಲ), ಮನಸ್ವಿ ಪಿ(ದ್ವಿತೀಯ-ಜಿಎಚ್‍ಎಸ್ ಸೂರಂಬೈಲು), ಶ್ರೀಲಕ್ಷ್ಮಿ (ತೃತೀಯ-ಎಯುಪಿಎಸ್ ಮವ್ವಾರು); ಅಭಿನಯ: ಸನ್ನಿಧಿ ಸಿ ಎಚ್ (ಪ್ರಥಮ-ಹೆದ್ದಾರಿ ಎಯುಪಿಎಸ್ ಬಾಯಾರು), ಸ್ಮøತಿ ಎಂ(ದ್ವಿತೀಯ-ಬಿಎಯುಪಿಎಸ್ ಕಾಟುಕುಕ್ಕೆ), ಅಪರ್ಣ(ತೃತೀಯ-ಜಿಯುಪಿಎಸ್ ಅಡ್ಕತ್ತಬೈಲು); ಕಥಾ ರಚನೆ: ನವನೀತ ಎಂ(ಪ್ರಥಮ-ಜಿಎಚ್‍ಎಸ್‍ಎಸ್ ಕುಂಡಂಗುಳಿ), ಸಿದ್ಧಿ ಶರ್ಮ ಬಿ (ದ್ವಿತೀಯ-ಎಯುಪಿಎಸ್ ಮುಳ್ಳೇರಿಯ), ಶ್ರಾವ್ಯ (ತೃತೀಯ-ಎಯುಪಿಎಸ್ ಪಾತೂರು); ಪುಸ್ತಕಾಸ್ವಾದನೆ: ರೀವಾ ಮರಿಯಾ ಕ್ರಾಸ್ತಾ (ಪ್ರಥಮ-ಎಸ್ ಬಿ ಎ ಎಸ್ ಬಿ ಎಸ್ ಬೇಳ), ಶಿವಪ್ರಸಾದ್ (ದ್ವಿತೀಯ- ಎಯುಪಿಎಸ್ ಕುಂಟಾರು), ಧನ್ಯಶ್ರೀ ಎಂ (ತೃತೀಯ-ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ ಕೂಡ್ಲು); ಕಾವ್ಯಾಲಾಪನೆ: ಶ್ರೀದುರ್ಗಾ ಎಸ್ (ಪ್ರಥಮ-ಮಹಾಜನ ಸಂ.ಕಾ.ಹೈಸ್ಕೂಲು ನೀರ್ಚಾಲು), ವೈಷ್ಣವ್ ಎಂ ಸುರೇಶ್(ದ್ವಿತೀಯ-ಜಿ ವಿ ಎಚ್ ಎಸ್ ಕಾರಡ್ಕ), ಮನ್ವಿ(ತೃತೀಯ-ಎಂಎಯುಪಿಎಸ್ ಕಲ್ಲಕಟ್ಟ); ಜನಪದ ಗೀತೆ: ಅನ್ವಿತ ಟಿ(ಪ್ರಥಮ-ಎಯುಪಿಎಸ್ ವಿದ್ಯಾಗಿರಿ), ಶ್ರಾವ್ಯ ಸಿ ಎಚ್ (ದ್ವಿತೀಯ-ಎಸ್ ಬಿ ಎ ಎಸ್ ಬಿ ಎಸ್ ಬೇಳ) , ಮೋನ್ಹಿಕ (ತೃತೀಯ-ಡಯಟ್ ಮಾಯಿಪ್ಪಾಡಿ) ಗಳಿಸಿದರು.