ಮುಂಡಿತ್ತಡ್ಕ: ವಾರ್ಷಿಕೋತ್ಸವ, ಹಾಗೂ ಪ್ರತಿಷ್ಠಾ ದಿನಾಚರಣೆ, ಅರ್ಧ ಏಕಹಾ ಭಜನೆ ಕಾರ್ಯಕ್ರಮ
0
ಡಿಸೆಂಬರ್ 28, 2018
ಬದಿಯಡ್ಕ: ಮುಂಡಿತ್ತಡ್ಕ ವಿಷ್ಣುನಗರದ ಶ್ರೀಮಹಾವಿಷ್ಣು ಭಜನಾ ಸಂಘದ 29ನೇ ವಾರ್ಷಿಕೋತ್ಸವವು ವಿವಿಧ ಕಾರ್ಯಕ್ರಮಗಳೊಂದಿಗೆ ಡಿ.30 ರಿಂದ ಜ.27ರ ವರಗೆ ಜರಗಲಿದೆ.
ಡಿ. 30 ರಂದು ಮಹಾವಿಷ್ಣು ಭಜನಾ ಸಂಘದ ಸ್ಥಾಪಕ ಸದಸ್ಯ ಸೀತಾರಾಮ ಅರಿಪ್ಪಾದೆ ಅವರು ದೀಪ ಪ್ರಜ್ವಲನೆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಲಿರುವರು.ಪ್ರತಿ ದಿನ ಸಂಜೆ7.30 ರಿಂದ 8.30ರ ವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ, ಬಳಿಕ ಅನ್ನದಾನ ನಡೆಯಲಿರುವುದು.
ಜ.27 ರಂದು ದೇಲಂಪಾಡಿ ಬಾಲಕೃಷ್ಣ ತಂತ್ರಿಯವರ ನೇತೃತ್ವದಲ್ಲಿ 12 ತೆಂಗಿನಕಾಯಿಗಳ ಗಣಪತಿ ಹೋಮ,ಶ್ರೀಸತ್ಯನಾರಾಯಣ ಪೂಜೆ ಹಾಗೂ ಅರ್ಧ ಏಕಹಾ ಭಜನೆ ಮೊದಲಾದ ಕಾರ್ಯಕ್ರಮಗಳು ನೆರವೇರಲಿದೆ.