ಅಕ್ರಮ ಮರಳುಗಾರಿಕೆ: ಮುಂದುವರಿಯಲಿದೆ ಕ್ರಮ: ಜಿಲ್ಲಾಧಿಕಾರಿ
0
ಡಿಸೆಂಬರ್ 03, 2018
ಕಾಸರಗೋಡು : ಜಿಲ್ಲೆಯಲ್ಲಿ ಹೆಚ್ಚಳಗೊಳ್ಳುತ್ತಿರುವ ಅಕ್ರಮ ಮರಳು ದಂಧೆಯನ್ನು ಮುಟ್ಟುಗೋಲು ಹಾಕುವ ಯತ್ನ ಇನ್ನೂ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಸೋಮವಾರ ತಮ್ಮ ಕೊಠಡಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಆರೋಪಿಗಳನ್ನು ಬೆನ್ನಟ್ಟಿ ಬಂಧಿಸುವುದು ಕೆಲವು ತಾಂತ್ರಿಕ ವಿಚಾರಗಳಿಂದ ಸಮಸ್ಯೆಯಾಗುತ್ತಿದೆ ಎಂದ ಅವರು ಜಿಲ್ಲೆಯ ಕಡವುಗಳ ರಸ್ತೆಗಳು ಅಕ್ರಮ ಸಾಗಾಟಕ್ಕೆ ಪೂರಕವಾಗಿರುವಂತೆ ಇರುವುದು ಪ್ರಧಾನ ಸಮಸ್ಯೆಯಾಗಿದೆ. ಇಂತಹ ಒಳರಸ್ತೆಗಳಲ್ಲಿ ಆರೋಪಿಗಳೂ ಸುಲಭವಾಗಿ ಪರಾರಿಯಾಗುವ ಸಾಧ್ಯತೆಯಿರುತ್ತದೆ. ಅಧಿಕಾರಿಗಳ ತಂಡದಲ್ಲಿ ಸಂಖ್ಯಾಬಲ ಕಡಿಮೆಯಿರುವುದೂ ಸಮಸ್ಯೆ ಎಂದು ಅವರು ನುಡಿದರು.
ಕೆಲದಿನಗಳ ಹಿಂದೆ ತಮ್ಮ ನೇತೃತ್ವದಲ್ಲಿ ನಡೆಸಿದ ದಾಳಿಯ ಕುರಿತು ಮಾತನಾಡಿದ ಅವರು ಸ್ಥಳೀಯ ಕೆಲವರು ಈ ದಂಧೆಯಲ್ಲಿ ನೇರವಾಗಿ ಭಾಗಿಯಾಗದೆ ಇತರ ರಾಜ್ಯಗಳ ಕಾರ್ಮಿಕರಿಂದ ಅಕ್ರಮ ಕಾರ್ಯ ನಡೆಸುತ್ತಿದ್ದಾರೆ. ಮೊದಲಿಗೆ ಇತರರಾಜ್ಯಗಳ ಮಂದಿಯನ್ನು (ಈ ನಿಟ್ಟಿನಲ್ಲಿತೊಡಗಿಸಿಕೊಂಡವರನ್ನು )ಬಂಧಿಸಿ ಅವರ ಊರಿಗೆ ಕಳುಹಿಸಲಾಗುವುದು. ನಂತರ ನಿಜವಾದ ಆರೋಪಿಗಳನ್ನು ಪತ್ತೆಮಾಡಿ ಕ್ರಮಕೈಗೊಳ್ಳಲಾಗುವುದು ಎಂದರು.