ಕಪ್ಪು ಹಣ: ಭಾರತೀಯ ಮೂಲದ ಎರಡು ಸಂಸ್ಥೆಗಳ ಮಾಹಿತಿ ವಿನಿಮಯಕ್ಕೆ ಸ್ವಿಸ್ ಸರ್ಕಾರ ಸಮ್ಮತಿ
0
ಡಿಸೆಂಬರ್ 03, 2018
ನವದೆಹಲಿ: ಕಪ್ಪು ಕುಳಗಳಿಗೆ ಹಣವಿಡಲು ಸುರಕ್ಷಿತ ಜಾಗವೆಂದೇ ಹೇಳಲಾಗುವ ಸಿಡ್ಜರ್ ಲ್ಯಾಂಡ್ ಇದೀಗ ಭಾರತ ಮೂಲಕ ಎರಡು ಸಂಸ್ಥೆಗಳು ಹಾಗೂ ಮೂವರು ವ್ಯಕ್ತಿಗಳು ತನ್ನಲ್ಲಿರಿಸಿದ ಹಣ ಹಾಗೂ ಸ್ವತ್ತಿನ ವಿವರವನ್ನು ಭಾರತ ಸರ್ಕಾರದೊಡನೆ ಹಂಚಿಕೊಲ್ಳಲು ಸಮ್ಮತಿಸಿದೆ.
ಸ್ವಿಸ್ ರಾಷ್ಟ್ರವು ಮಾಹಿತಿ ಹಂಚಿಕೆಗೆ ಒಪ್ಪಿರುವ ಒಂದು ಸಂಸ್ಥೆ ಇದಾಗಲೇ ಬಂಡವಾಳ ಮಾರುಕಟ್ಟೆಯ ನಿಯಂತ್ರಕ ಸೆಬಿ "ಕಪ್ಪುಪಟ್ಟಿ"ಗೆ ಸೇರಿಸಿರುವ ಸಂಸ್ಥೆಯಾಗಿದ್ದು ಇದು ಬಹುಪಾಲು ಶೇರು ಮಾರುಕಟ್ಟೆಯ ನಿಯಮಾವಳಿಗಳ ಉಲ್ಲಂಘನೆ ಮಾಡಿದೆ ಎನ್ನಲಾಗಿದೆ,. ಇದೇ ವೇಳೆ ಇನ್ನೊಂದು ಸಂಸ್ಥೆ ತಮಿಳುನಾಡಿನ ಪ್ರಮುಖ ರಾಜಕೀಯ ಪಕ್ಷದೊಡನೆ ಸಂಬಂಧ ಹೊಂದಿದೆ ಎಂದು ಹೇಳಲಾಗುತ್ತದೆ.
ಸ್ವಿಸ್ ಸರ್ಕಾರದ ಪ್ರತ್ಯೇಕ ಗೆಝೆಟ್ ಅಧಿಸೂಚನೆಗಳ ಪ್ರಕಾರ, ದೇಶದ ಫೆಡರಲ್ ತೆರಿಗೆ ಇಲಾಖೆಯು ಜಿಯೋಡೆಸಿಕ್ ಲಿಮಿಟೆಡ್ ಹಾಗೂ ಆದಿ ಎಂಟರ್ಪ್ರೈಸಸ್ ಪ್ರೈ.ಲಿ. ಕುರಿತು ಮಾಹಿತಿ ಒದಗಿಸಿ 'ಆಡಳಿತಾತ್ಮಕ ಸಹಾಯ’" ಮಾಡುವುದಾಗಿ ಹೇಳಿದೆ.
ಇದೇ ಬಗೆಯಲ್ಲಿ ಜಿಯೋಡೆಸಿಕ್ ಲಿಮಿಟೆಡ್ ಗೆ ಸೇರಿದ ಮೂವರು ವ್ಯಕ್ತಿಗಳಾದ ಪಂಕಜ್ ಕುಮಾರ್ ಓಂಕಾರ್ ಶ್ರೀವಾಸ್ತವ, ಪ್ರಶಾಂತ್ ಶರದ್ ಮುಲೇಕರ್ ಹಾಗೂ ಕಿರಣ್ ಕುಲಕರ್ಣಿ ಅವರ ಕುರಿತು ಮಾಹಿತಿ ಒದಗಿಸಲು ಸಹ ಒಪ್ಪಿಗೆ ಸೂಚಿಸಿದೆ.
ಸ್ವಿಸ್ ಸರ್ಕಾರವು ಎರಡು ಕಂಪನಿಗಳು ಮತ್ತು ಮೂರು ವ್ಯಕ್ತಿಗಳ ಬಗ್ಗೆ ಭಾರತೀಯ ಅಧಿಕಾರಿಗಳು ಕೋರಿರುವ ಮಾಹಿತಿ ಮತ್ತು ನೆರವು ಸಂಬಂಧಿಸಿದ ನಿರ್ದಿಷ್ಟ ವಿವರಗಳನ್ನು ಬಹಿರಂಗಪಡಿಸದಿದ್ದರೂ, ಅಂತಹ 'ಆಡಳಿತಾತ್ಮಕ ಸಹಾಯ"ಹಣಕಾಸು ಮತ್ತು ತೆರಿಗೆ-ಸಂಬಂಧಿತ ಪುರಾವೆಗಳನ್ನು ಸಲ್ಲಿಸಿದೆ, ಬ್ಯಾಂಕ್ ಖಾತೆ ವಿವರಗಳು ಮತ್ತು ಇತರ ಹಣಕಾಸು ಮಾಹಿತಿಗೆ ಸಂಬಂಧಿಸಿದ ದಾಖಲೆಗಳನ್ನು ಹಂಚಿಕೊಲ್ಳಲಾಗಿದೆ.
ಭಾರತಕ್ಕೆ ಆಡಳಿತಾತ್ಮಕ ನೆರವು ನೀಡಲು ಸ್ವಿಜರ್ಲೆಂಡ್ ನ ಫೆಡರಲ್ ಟ್ಯಾಕ್ಸ್ ಅಡ್ಮಿನಿಸ್ಟ್ರೇಷನ್ (ಎಫ್ಟಿಎ) ಸಮ್ಮತಿಸಿದ್ದು ಈ ಕುರಿತಂತೆ ಸಂಬಂಧಪಟ್ಟ ಸಂಸ್ಥೆ ಅಥವಾ ವ್ಯಕ್ತಿಗಳುಮೇಲ್ಮನವಿ ಸಲ್ಲಿಸುವುದಕ್ಕೆ ಸಹ ಅವಕಾಶವಿದೆ.