HEALTH TIPS

ಶಬರಿಮಲೆಗೆ ಬಿಜೆಪಿ ತಂಡ; ಮಹಿಳೆಯರ ಮಹಾ ಗೋಡೆ ನಿಮರ್ಿಸಲು ಕೇರಳ ಸಕರ್ಾರ ಕರೆ

ಕೊಚ್ಚಿ: ಶಬರಿಮಲೆ ವಿವಾದ ತಾರಕಕ್ಕೇರಿರುವಂತೆಯೇ ಕೇರಳ ಸಕರ್ಾರ ಮಹಿಳೆಯರ ಬೃಹತ್ ಮಹಾಗೋಡೆಯನ್ನು ನಿಮರ್ಿಸಲು ಕರೆ ನೀಡಿದೆ. ಖ್ಯಾತ ಪವಿತ್ರ ಯಾತ್ರಾ ತಾಣ ಶಬರಿಮಲೆಯಲ್ಲಿ ಉಂಟಾಗಿರುವ ಗೊಂದಲದ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪಕ್ಷದ ನಾಲ್ವರು ಸದಸ್ಯರನ್ನು ಒಳಗೊಂಡ ಕೇಂದ್ರದ ತಂಡವನ್ನು ಕೇರಳಕ್ಕೆ ಕಳುಹಿಸಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಕಾಸರಗೋಡಿನಿಂದ ತಿರುವನಂತಪುರಂ ಜಿಲ್ಲೆಯವರೆಗೂ ಮಹಿಳೆಯರ ಬೃಹತ್ ಮಹಾಗೋಡೆ ನಿಮರ್ಿಸಲು ಕರೆ ನೀಡಿದ್ದಾರೆ. ಈ ಬಗ್ಗೆ ಟ್ವಿಟರ್ ನಲ್ಲಿ ಕೇರಳ ರಾಜ್ಯದ ಹಣಕಾಸು ಸಚಿವ ಥಾಮಸ್ ಐಸಾಕ್ ಬರೆದಿದ್ದು, 'ಪುರಾತನ ಯುಗದ ಕಟ್ಟಳೆಗಳಿಗೆ ಜೋತು ಬೀಳುವುದನ್ನು ತಪ್ಪಿಸಲು 'ಮಹಿಳೆಯರ ಮಹಾ ಗೋಡೆ'ಯನ್ನೇ ನಿಮರ್ಿಸಿ ಎಂದು ಹೇಳಿದ್ದಾರೆ. ಅಲ್ಲದೆ 'ಲಕ್ಷಾಂತರ ಮಹಿಳೆಯರು ಜತೆಯಾಗಿ ಕೇರಳದ ಒಂದು ತುದಿಯಿಂದ ಮತ್ತೊಂದು ತುದಿಯವರೆಗೂ ಹೊಸ ವರ್ಷದ ದಿನ ಮಹಾ ಗೋಡೆಯಂತೆ ಒಗ್ಗೂಡಲು ಬನ್ನಿ. ಕೈಜೋಡಿಸಿ ಎಂದು ಕರೆ ನೀಡಿದ್ದಾರೆ. ಅಂತೆಯೇ 'ಕೇರಳದ ಪ್ರಗತಿಶೀಲ ಸಮಾಜವನ್ನು ಯಾರೊಬ್ಬರೂ ಅಂಧಯುಗಕ್ಕೆ ದೂಡಲು ಸಾಧ್ಯವಿಲ್ಲ ಎಂದು ಶಬರಿಮಲೆ ವಿಚಾರವಾಗಿ ಶನಿವಾರ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, 600 ಕಿ.ಮೀ. ಉದ್ದದ ಮಹಿಳೆಯರ ಮಹಾ ಗೋಡೆ ನಿಮರ್ಿಸುವ ಕುರಿತೂ ಘೋಷಿಸಿದರು. ಶಬರಿಮಲೆಗೆ ಋತುಮತಿ ಮಹಿಳೆಯರು, ಯುವತಿಯರ ಪ್ರವೇಶಕ್ಕೆ ಇದ್ದ ನಿರ್ಬಂಧ ತೆರವುಗೊಳಿಸಿ, ಎಲ್ಲ ವಯೋಮಾನದ ಮಹಿಳೆಯ ಪ್ರವೇಶಕ್ಕೆ ಅವಕಾಶ ಕೊಟ್ಟು ಸುಪ್ರೀಂ ಕೋಟರ್್ ತೀಪರ್ು ನೀಡಿತ್ತು. ಆದರೆ, ಮಹಿಳೆಯರ ಪ್ರವೇಶ ವಿರೋಧಿಸಿ ಬಲ ಪಂಥೀಯ ಸಂಘಟನೆಗಳು ಕೇರಳದಾದ್ಯಂತ ಪ್ರತಿಭಟನೆ ನಡೆಸಿದ್ದವು. ಶ್ರೀ ನಾರಾಯಣ ಧರ್ಮ ಪರಿಪಾಲನಾ(ಎಸ್ಎನ್ಡಿಪಿ) ಯೋಜನಂ ಸೇರಿದಂತೆ ಸಾಮಾಜಿಕ ಸಂಘಟನೆಗಳು ಹಾಗೂ ಜಾತಿ ಆಧಾರಿತ ಪ್ರಮುಖ ಸಂಘಟನೆಗಳೊಂದಿಗೆ ಕೇರಳ ಸಕರ್ಾರ ಸಭೆ ನಡೆಸಿ, ಜನವರಿ 1ರಂದು ಮಹಿಳೆಯರ ಮಹಾ ಗೋಡೆ ನಿಮರ್ಿಸಲು ನಿರ್ಧರಿಸಿದೆ. ರಾಜ್ಯದ ಜಾತ್ಯತೀತ ಮತ್ತು ಪ್ರಗತಿಪರ ಮನಸ್ಥಿತಿಯನ್ನು ಇಡೀ ದೇಶಕ್ಕೆ ತೋರುವ ನಿಟ್ಟಿನಲ್ಲಿ ಕಾಸರಗೋಡಿನಿಂದ ತಿರುವನಂತಪುರಂ ಜಿಲ್ಲೆಯವರೆಗೂ ಮಹಿಳೆಯರ ಮಹಾ ಗೋಡೆ ನಿಮರ್ಿಸುವಂತೆ ಕರೆ ನೀಡಿರುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. 'ಕೇರಳದ ಜಾತ್ಯತೀತ ವಾತಾವರಣದ ರಕ್ಷಣೆಗಾಗಿ ಪ್ರಗತಿಶೀಲ ಮನಸುಗಳು ಮುಂದೆ ಬಂದು ಬೆಂಬಲ ನೀಡುವಂತೆ ಕೋರಿದ್ದಾರೆ. ಬಿಜೆಪಿ ನಾಲ್ವರು ಸದಸ್ಯರ ಕೇಂದ್ರ ತಂಡ ಭಾನುವಾರ ಶಬರಿಮಲೆ ವಲಯದಲ್ಲಿ ಕಾರ್ಯಕರ್ತರು ಹಾಗೂ ಜನರನ್ನು ಭೇಟಿ ಮಾಡಿ 'ಸತ್ಯಾಗ್ರಹಿ'ಗಳ ವಿರುದ್ಧ ನಡೆಸಲಾಗಿರುವ ದೌರ್ಜನ್ಯಗಳ ಮಾಹಿತಿ ಕಲೆ ಹಾಕಲಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯದಶರ್ಿ ಸರೋಜ್ ಪಾಂಡೆ, ಪಕ್ಷದ ಪರಿಶಿಷ್ಟ ಜಾತಿ ಮೋಚರ್ಾದ ರಾಷ್ಟ್ರೀಯ ಅಧ್ಯಕ್ಷ ವಿನೋದ್ ಸೋನಕರ್, ಸಂಸದರಾದ ಪ್ರಹ್ಲಾದ್ ಜೋಶಿ ಹಾಗೂ ನಳಿನ್ ಕುಮಾರ್ ಕಟೀಲ್ ಅವರನ್ನು ಕೇಂದ್ರ ತಂಡ ಒಳಗೊಂಡಿದೆ. 15 ದಿನಗಳಲ್ಲಿ ತಂಡವು ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರಿಗೆ ವರದಿ ಸಲ್ಲಿಸಲಿದೆ ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ. ತಿರುವಾಂಕೂರು ದೇವಸ್ವಂ ಮಂಡಳಿ ಸಹ ಮಹಿಳೆಯ ಪ್ರವೇಶಕ್ಕಿರುವ ನಿರ್ಬಂಧವನ್ನು ಸಮಥರ್ಿಸಿಕೊಂಡಿದೆ. ಸೆಪ್ಟೆಂಬರ್ 28ರಂದು ಸುಪ್ರೀಂ ಕೋಟರ್್ ತೀಪರ್ು ನೀಡಿದ ನಂತರದಲ್ಲಿ ಕೆಲವು ಮಹಿಳೆಯರು ಶಬರಿಮಲೆ ದೇವಸ್ಥಾನ ಪ್ರವೇಶಕ್ಕೆ ಪ್ರಯತ್ನಿಸಿದರಾದರೂ, ಭಕ್ತಾದಿಗಳು ಹಾಗೂ ಬಲ ಪಂಥೀಯ ಸಂಘಟನೆಗಳು ಪ್ರತಿಭಟನೆ ನಡೆಸಿ ತಡೆದವು. ತೀಪರ್ಿಗೆ ಸಂಬಂಧಿಸಿದಂತೆ ಪುನರ್ಪರಿಶೀಲನಾ ಅಜರ್ಿ ವಿಚಾರಣೆಯನ್ನು ಸುಪ್ರೀಂ ಕೋಟರ್್ ಜನವರಿಯಲ್ಲಿ ನಡೆಸಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries