ಪುಟಾಣಿಗಳಿಂದ ನಡೆದ ತಿಂಡಿಮೇಳ: ನೋಟಕರ ಬಾಯಲ್ಲಿ ನೀರೂರಿಸಿದ ಹಲ ನಮೂನೆಯ ಸಾಂಪ್ರದಾಯಿಕ ತಿಂಡಿಗಳು
0
ಡಿಸೆಂಬರ್ 04, 2018
ಕಾಸರಗೋಡು: ಪುಟಾಣಿ ಮಕ್ಕಳಿಂದ ನಡೆದ ತಿಂಡಿ ಮೇಳ ಸಾರ್ವಜನಿಕರ ಗಮನಸೆಳೆದಿದೆ. ಪೆರಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿ ಮಕ್ಕಳ ನೇತೃತ್ವದಲ್ಲಿ ತಿಂಡಿಮೇಳ-2018 ಜರುಗಿತು. "ರುಚಿಯಿಂದ ಅರಿವಿನೆಡೆಗೆ " ಎಂಬ ಘೋಷಣೆ ಸಹಿತವಾಗಿ ನಡೆದ ಕಾರ್ಯಕ್ರಮ ವಿಶಿಷ್ಟವಾಗಿತ್ತು. ವಿವಿಧ ರೀತಿಯ ದೋಸೆಗಳು, ಇಡ್ಲಿ, ಕಜ್ಜಾಯ, ಕಾಯಿಕಡುಬು, ಗುಳಿಯಪ್ಪ, ಕೇರಳೀಯ ಶೈಲಿಯ ಪುಟ್ಟ್ಗಳು, ಪತ್ತಲ್, ಕೊಳಕಟ್ಟ, ನೈಯಪ್ಪಂ ಸಹಿತ ನೂರಾರು ತಿಂಡಿಗಳು ನೋಟಕರ ಬಾಯಲ್ಲಿ ನೀರೂರುವಂತೆ ಮಾಡಿದುವು. ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ತಯಾರಿಸಿದ ಸಾಂಪ್ರದಾಯಿಕ ಶೈಲಿಯ ತಿಂಡಿಗಳನ್ನು ಇಲ್ಲಿ ತಂದು ಪ್ರದರ್ಶನ ಮಾಡಿದ್ದರು.
ತಿಂಡಿ ಮೇಳವನ್ನು ಶಾಲಾಮುಖ್ಯಶಿಕ್ಷಕ ವಿ.ಎಂ.ನಾಸರ್ ಉದ್ಘಾಟಿಸಿದರು. ಹಿರಿಯ ಸಹಾಯಕಿ ಕೆ.ಕೆ.ಶ್ಯಾಮಲಾ, ಶಿಕ್ಷಕರಾದ ಒ.ಪಿ.ಶೀಬಾ, ಪಿ.ಪ್ರಕಾಶನ್, ಸುನಿತಾ ಡಾನಿಯಲ್ ಕಾರ್ಯಕ್ರಮಕ್ಕೆ ನೇತೃತ್ವ ವಹಿಸಿದ್ದರು.