ಕುಂಟಿಕಾನ ಮಠದಲ್ಲಿ ಕಾರ್ತಿಕ ಸೋಮವಾರ ವಿಶೇಷ ಕಾರ್ಯಕ್ರಮಗಳು
0
ಡಿಸೆಂಬರ್ 04, 2018
ಬದಿಯಡ್ಕ: ನೀರ್ಚಾಲು ಸಮೀಪದ ಕುಂಟಿಕಾನ ಮಠ ಶ್ರೀಶಂಕರನಾರಾಯಣ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಎರಡನೇ ಸೋಮವಾರ ವಿಶೇಷ ಕಾರ್ಯಕ್ರಮಗಳು ಶ್ರದ್ದಾ ಭಕ್ತಿಯಿಂದ ನೆರವೇರಿತು.
ಮಧ್ಯಾಹ್ನ ಅನ್ನದಾನ ಹಾಗೂ ರಾತ್ರಿ ವಿಶೇಷ ದೀಪಾಲಂಕಾರ ಸಹಿತ ಕಾರ್ತಿಕ ಪೂಜೆ ನಡೆಯಿತು. ಕುಂಬಳೆ ನಿತ್ಯಾನಂದ ಮಠದ ಭಜನಾ ತಂಡದವರಿಂದ ಭಜನಾ ಸಂಕೀರ್ತನೆ ನಡೆಯಿತು. ನಾರಾಯಣ ದಾಸ ಕುಂಬಳೆ, ಶೈಲಜಾ, ರೇವತಿ, ಶರ್ಮಿಳಾ, ಬೇಬಿ, ಚಂದ್ರಕಲಾ, ಹರ್ಷಿತಾ ಸಂಕೀರ್ತನೆಯಲ್ಲಿ ಸಹಕರಿಸಿದರು. ಈ ಸಂದರ್ಭ ತಂಡದ ಸಂಚಾಲಕ ನಾರಾಯಣ ದಾಸ್ ಕುಂಬಳೆ ಅವರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು.